ತಂದೆಯ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ಮಕ್ಕಳು

Children wrote exams despite father's death

ತಂದೆಯ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ಮಕ್ಕಳು  

ರಾಣೆಬೆನ್ನೂರ 08:  ತಂದೆಯ ಆಕಸ್ಮಿಕ ಸಾವಿನ ಮಧ್ಯೆಯೂ ಅಣ್ಣ- ತಂಗಿಯರಿಬ್ಬರು ಇತ್ತೀಚೆಗೆ ನಡೆದ  ಎಸ್‌. ಎಸ್‌. ಎಲ್‌. ಸಿ, ಪರೀಕ್ಷೆಯ ಹಿಂದಿ ವಿಷಯವನ್ನು ಬರೆದ ಘಟನೆ ನಗರದಲ್ಲಿ ನಡೆದಿದೆ.  ತಾಲೂಕಿನ ಪದ್ಮಾವತಿಪುರದ ಹನುಮಂತಪ್ಪ ಗುಡ್ಡಪ್ಪ ಲಮಾಣಿ( 46) ಎಂಬಾತನು ಬೆಳಿಗ್ಗೆ ಏಕಾಏಕಿ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ. , ಬಿಇಓ ಮತ್ತಿತರರು ಮೃತನ ಮನೆಗೆ ತೆರಳಿ ಮಕ್ಕಳಿಗೆ ಸ್ಥೈರ್ಯ ತುಂಬಿ ಪರೀಕ್ಷೆ ಬರೆಯಲು ಹೇಳಿದರು.    ಪರೀಕ್ಷೆಗೆ ಹೋಗಬೇಕೆನ್ನುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಂಬಂಧಿಕರು, ಗ್ರಾಮಸ್ಥರು ಮಕ್ಕಳಿಬ್ಬರಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಮಾನಸಿಕವಾಗಿ ದೈರ್ಯ ತುಂಬಿದರು. ಮಗ ಧನರಾಜ್ ರಾಜೇಶ್ವರಿಯಲ್ಲಿ ಹಾಗೂ ಮಗಳು ರೋಟರಿ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದರು. ಇನ್ನೋರ್ವ ಮಗ ಸಂತೋಷ್ ಮೈಸೂರಿನಲ್ಲಿ ಎಂಬಿಎ ಓದುತ್ತಿದ್ದು ಸಂಜೆ ವೇಳೆಗೆ ಮಕ್ಕಳ ಸಮ್ಮುಖದಲ್ಲಿ ಮೃತನ ಅಂತ್ಯಕ್ರಿಯೆ ನೆರವೇರಿಸಲಾಯಿತು.