ಹಕ್ಕುಪತ್ರ ವಿತರಣೆಯ ಸಮರಾ್ಣ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾದ 23 ನೇ ವಾರ್ಡಿನ ನಾಗರಿಕರು
ಗದಗ 20:- ಆಡಳಿತರೂಢ ಕಾಂಗ್ರೇಸ್ ಸರಕಾರದ ಐತಿಹಾಸಿಕ 6 ನೇ ಗ್ಯಾರಂಟಿಯಾದ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣಾ ಸಮಾರಂಭವಾದ ಸಮರಾ್ಣ ಸಂಕಲ್ಪ ಸಮಾವೇಶ- 2025 ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬ್ರಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಒಂದು ಅವಿಸ್ಮರಣೀಯ ಐತಿಹಾಸಿಕ ಸಮಾವೇಶಕ್ಕೆ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ನಾಗರಿಕರು ಭಾಗಿಯಾದರು. ಈ ಸಂಧರ್ಭದಲ್ಲಿ ಗದಗ ಬೆಟಗೇರಿ ನಗರಸಭಯ 23 ನೇ ವಾರ್ಡಿನ ಜನಪ್ರಿಯ ನಗರಸಭಾ ಸದಸ್ಯರಾದ ಜನಾಬ್ ಬರಕತ ಅಲಿ ಮುಲ್ಲಾ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಕಾಂಗ್ರೇಸ್ ಮುಖಂಡರಾದ ಖಾದರ್ ಕಿರೆಸೂರ್, ಪ್ರಸನ್ ಕುಮಾರ್ ತುರಕಾಣಿ, ಸಿದ್ದಲಿಂಪ್ಪ ತುರಕಾಣಿ, ಅಂದಾನಯ್ಯ ಗುಜಮಾಗಡಿ, ಜಾಕೀರ್ ಕುನ್ನಿಬಾವಿ, ತೇಜು ಮರಡ್ಡಿ, ದಾವಲ್ ಅಣ್ಣಿಗೇರಿ ವಿಜಯ ಬಳುಬ್ಬಿ, ಆಶೀಫ್ ಮುಲ್ಲಾ, ಮಂಜುನಾಥ್ ಕುಂಬಾರ, ಜಗದೀಶ್ ಚನ್ನಪ್ಪಗೌಡ್ರ, ಇಮಾಮಸಾಬ್ ಹುಬ್ಬಳ್ಳಿ, ಬಸವರಾಜ್ ಹರ್ತಿ, ಬರಕತಅಲಿ ಮುಲ್ಲಾ, ಪ್ರಶಾಂತ್ ಕಮತರ, ಪ್ರಮೋದ್ ತುರಕಾಣಿ ಗಣೇಶ ಕನ್ಯಾಳ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಗದಗ20/05/20