ಮಮದಾಪೂರ, 29 : ದಿ. ಎ 29ರ ಮಂಗಳವಾರ 2024-25ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಬೆಳಿಗ್ಗೆ 11.00 ಗಂಟೆಗೆ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭ ಮಾಡಲಾಯಿತು. ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ. ಪ್ರಕಾಶ ಹಡಪದ ಇವರು 07 ದಿನಗಳ ಶಿಬಿರದ ವರದಿಯನ್ನು ಪ್ರಸ್ತುತಪಡಿಸಿದರು. ಕ್ಚಿಜ್ ಸ್ಪರ್ಧೆಯಲ್ಲಿ ವಿಜೇತರಾದ 02 ತಂಡಗಳಿಗೆ ಹಾಗೂ ಶಿಬಿರದ ಕ್ರೀಯಾಶೀಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಿಬಿರದ ಸಹ ಸಂಚಾಲಕರಾದ ಶ್ರೀ. ಸುರೇಶ ಕರಿಕಲ್ಲ ರವರು ಶಿಕ್ಷಕರ ಅನಿಸಿಕೆ ವ್ಯಕ್ತಪಡಿಸಿ ಶಿಬಿರದ ಯಶಸ್ವಿಗೆ ಕಾರಣರಾದ ಎಲ್ಲರಿಗೆ ಅಭಿನಂದನೆ ಸಲ್ಲಿಸಲಾಯಿತು ಹಾಗೂ ಶಿಬಿರಾರ್ಥಿಯಾದ ಸಿದ್ದಪ್ಪಾ ಕುಂಬಾರ ಮಾತನಾಡಿ ಶಿಬಿರದಿಂದ ನಮ್ಮಲ್ಲಿನ ದ್ವೇಷ ಭಾವನೆ ಕಳಚಿ ಪರಸ್ಪರ ಸ್ನೇಹ ಸಹಕಾರದ ಭಾವನೆಗಳು ಮೂಡಿಬಂದವು ಎಂದು ವಿದ್ಯಾರ್ಥಿಗಳ ಅನಿಸಿಕೆ ವ್ಯಕ್ತಪಡಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಳ್ಳುಬ್ಬಿ ಗ್ರಾಮದ ಮುಖಂಡರಾದ ಮಲ್ಲಯ್ಯ ಹಿರೇಮಠ್ ರವರು ಭಾಗವಹಿಸಿ ಮಾತಾನಾಡಿ 07 ದಿನಗಳ ಶಿಬಿರದ ವಿದ್ಯಾರ್ಥಿಗಳ ಮಾಡಿದ ಶ್ರಮದಾನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಶಂಶಿಸದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಶಿವಾನಂದ ಹಿರೇಮಠ ಮಾತನಾಡಿ ವಿದ್ಯಾರ್ಥಿಗಳು ಕೇವಲ ಆನ್ಲೈನ್ ನಲ್ಲಿ ಇರದೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಾದ ಎನ್.ಎಸ್.ಎಸ್. ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ. ರೂಕ್ಸನಾ ಉಪನ್ಯಾಸಕರು ನಿರೂಪಿಸಿದರು. ಮಂಜುಳಾ ಉಪನ್ಯಾಸಕರು ಅತಿಥಿಗಳ ಸ್ವಾಗತಭಾಷಣ ಮಾಡಿದರು ಹಾಗೂ ಮಹಾಂತೇಶ ಕಾಖಂಡಕಿ ರವರು ವಂದನಾರೆ್ಣ ಮಾಡಿದರು. ಕಾರ್ಯಕ್ರಮದಲ್ಲಿ ಮಮದಾಪೂರ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಉಪನ್ಯಾಸಕರು, ಬೆಳ್ಳುಬ್ಬಿ ಗ್ರಾಮದ ಗುರು ಹಿರಿಯರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.