ಪರಿಶಿಷ್ಠ ಜಾತಿಗಳ ಸಮಗ್ರ ಸಮೀಕ್ಷೆ
ಹಾವೇರಿ 21 :ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗದಿಂದ ಮಾಡುತ್ತಿರುವ ಪರಿಶಿಷ್ಠ ಜಾತಿಗಳ ಸಮಗ್ರ ಸಮೀಕ್ಷೆಗೆ ಗಣತಿದಾರರು ಎಲ್ಲಾ ಮನೆಗಳಿಗೂ ಭೇಟಿ ನೀಡಿದಾಗ ಎಲ್ಲ ರೀತಿಯ ಮಾಹಿತಿಯನ್ನು ನೀಡುವಂತಾಗಬೇಕು ಹಾಗೂ ಗಣತಿದಾರರು ಯಾರನ್ನು ಕೈಬಿಡದೇ ದಾಖಲಾತಿ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು 101 ಜಾತಿಗಳ ವಿದ್ಯಾವಂತರು,ವಿದ್ಯಾರ್ಥಿಗಳು, ವಿದ್ಯಾವಂತ ನೌಕರರು ಹಾಗು ಸಮುದಾಯದ ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖಂಡರು,ಪ್ರತಿಯೊಂದು ಜಾತಿಯ ಸರ್ವರೂ ಸಮೀಕ್ಷೆಯಿಂದ ವಂಚಿತರಾಗದಂತೆ,ನಿಗಾ ವಹಿಸಲು ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಆಶಯದಂತೆ ಎಲ್ಲಾ ಪರಿಶಿಷ್ಠ 101 ಜಾತಿಗಳು ತಮ್ಮ ಜಾತಿಯ ಜನಸಂಖ್ಯೆ ಅನುಸಾರ ಒಳಮೀಸಲಾತಿ ಪಾಲು ಪಡೆಯುವುದು ಸಂವಿಧಾನ ಬದ್ಧ ಹಕ್ಕಾಗಿದೆ.ಆಯೋಗ ಕಲ್ಪಿಸಿರುವ ಆನ್ಲೈನ್ ಮೂಲಕ ಸ್ವಯಂಘೋಷಣೆ ಅವಕಾಶವನ್ನು ಉಪಯೋಗಿಸಿಕೊಂಡು,ಪ್ರತಿ ಕುಟುಂಬದ ಮೊಬೈಲ್ ಮೂಲಕ ಮಾಹಿತಿ ದಾಖಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸಬೇಕಾಗಿದೆ,ಮೊಬೈಲ್ ಮೂಲಕ ಯಾವ ರೀತಿ ಕುಟುಂಬದ ಸಮಗ್ರ ಮಾಹಿತಿ ದಾಖಲಿಸಲು ಮೇಲಿನ ವಿಡಿಯೋ ಮೂಲಕ ನೀಡಿರುವ ನಿಯಮದಂತೆ ಆಯೋಗವೇ ಸರಳ ನಿಯಮದಲ್ಲಿ ಮಾಹಿತಿ ನೀಡಲು ಅವಕಾಶ ಕಲ್ಪಿಸಿದೆ.ಮೇ-28ರ ವರಿಗೂ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.ಸಂವಿಧಾನದ ಆಶಯದಂತೆ ಸರ್ವರೂ ಸಂವಿಧಾನದ ಪಾಲನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಸಮಾನವಾಗಿ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಜವಾಬ್ದಾರಿ ನಿರ್ವಹಿಸಬೇಕೆಂದು ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಕೋರಿದ್ದಾರೆ.