ವಿಜಯಪುರ 24: ಬಿ.ಜೆ.ಪಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರು ಪಂಚಾಯಿತಿ ರಾಜ್ಯ ಸಚಿವರಾದ ಪ್ರೀಯಾಂಕಾ ಖರ್ಗೆ ಅವರಿಗೆ ಅತ್ತಿಚೆಗೆ ನಾಯಿಗೆ ಹೊಲಿಸಿ ತಮ್ಮ ಕೀಳುಮಟ್ಟದ ನಾಲಿಗೆಯನ್ನು ಹರಿಬಿಟ್ಟು ಅಸಂವಿಧಾನಿಕ ಪದ ಬಳಕೆ ಮಾಡಿರುವುದು ಖಂಡನೀಯ ವಿಷಯ, ಕೂಡಲೇ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಅಸಂಖ್ಯಾತ ದಲಿತರ ಭಾವನೆಗಳಿಗೆ ದಕ್ಕೆ ಉಂಟು ಮಾಡಿರುವ ಹಿನ್ನಲೆ ಭಹಿರಂಗವಾಗಿ ಕ್ಷಮೇ ಕೇಳಬೇಕು.
ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಪ್ರಚೋದನೆಗೊಳಿಸುವಂತಹ ಹೇಳಿಕೆಗಳನ್ನು ನೀಡಿರುವ ಬಿ.ಜೆ.ಪಿಯ ಕೈಗೊಂಬೆ, ಕೈಚೀಲ ಆಗಿರುವ ಚಲವಾದಿ ನಾರಾಯಣ ಸ್ವಾಮಿಯವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ, ಬುದ್ಧ, ಬಸವ . ಅಂಬೇಡ್ಕರ ಅವರ ಅನುಯಾಯಿಯಾಗಿ ಆದರ್ಶಗಳನ್ನು ರೂಡಿಸಿಕೊಂಡಿದ್ದರೆ ಈ ತರಹದ ಹೇಳಿಕೆಗಳನ್ನು ಕೊಡುತ್ತಿರಲಿಲ್ಲ, ದಲಿತ ಸಮುದಾಯದ ಕೆಂಗಣಿಗೆ ಗುರಿಯಾಗಿದ್ದು, ಕೂಡಲೇ ರಾಜಕೀಯ ಸನ್ಯಾಸತ್ವ ತೆಗೆದುಕೊಂಡು ಮನೆಗೆ ಹೋಗಿ ಎಂದು ಯುವ ಕಾಂಗ್ರೆಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಪೂಜಾರಿ ಅವರು ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ