ಲೋಕದರ್ಶನ ವರದಿ
ಡಿ.ಪುರುಷೋತ್ತಮಗೆ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿ
ಕಂಪ್ಲಿ 28: ಕಂಪ್ಲಿ ತಾಲೂಕು ವ್ಯಾಪ್ತಿಯ ಹಂಪಾದೇವನಹಳ್ಳಿ ಗ್ರಾಪಂಯ ಚಿಕ್ಕಜಾಯಿಗನೂರು ಗ್ರಾಮದ ಹಿಂದುಸ್ತಾನಿ ಸಂಗೀತ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ ಗಾಯಕ ಡಿ.ಪುರುಷೋತ್ತಮ ಇವರಿಗೆ “ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾದ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಇಲ್ಲಿನ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಾಗರಾಜ ಬೈರಿ, ಸರಸ್ವತಿ ದಾಸಪ್ಪ ಶೆಣ್ಯೆ ಪ್ರತಿಷ್ಠಾನದ ಅಧ್ಯಕ್ಷ ಡಾ.ನಾಗೇಶ ಸಂಜೀವ ಕಿಣಿ ಅವರು ರಂಗಭೂಮಿ ಸೇರಿದಂತೆ ಕಲೆ, ಸಾಹಿತ್ಯ, ಸಂಗೀತದಲ್ಲಿ ಸಾಧನೆ ಮಾಡಿದ ಡಿ.ಪುರುಷೋತ್ತಮ ಅವರಿಗೆ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಮಾತನಾಡಿ, ರಂಗಭೂಮಿ ಸೇವೆಯನ್ನು ಪರಿಗಣಿಸಿ, “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿ ನೀಡಿದ್ದು, ಇನ್ನಷ್ಟು ಸೇವೆಗೆ ಅನುವು ಮಾಡಿಕೊಟ್ಟಿದೆ. ಈ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಡಾ.ಗಂಗಾಧರ್ಪ, ಡಾ.ನಾಗರತ್ನ ಎಸ್.ಶೆಟ್ಟಿ, ಜ್ಯೋತಿ, ಗಣೇಶ ಶೆಣ್ಯೆ ಸೇರಿದಂತೆ ಇತರರು ಇದ್ದರು.