ಪದವಿ ಶಿಕ್ಷಣವೇ ಪಕ್ವತೆಯ ಬೇರು: ಪ್ರಭುಸ್ವಾಮಿ ಹೇಮಗಿರಿಮಠ

Degree education is the root of maturity: Prabhuswamy Hemagiri Math

ಆಲಮಟ್ಟಿ 24: ಪದವಿ ಹಂತದ ಶಿಕ್ಷಣ ಅತ್ಯಮೂಲ್ಯ. ಅದು ಯುವಜನತೆಯ ಜೀವನ ಮೌಲ್ಯ ರೂಪಿಸುವ ಪಕ್ವತೆಯ ಬೇರು ಅಗಿದೆ. ಈ ದಿವ್ಯಾನುಭೂತಿ ಪದವಿ ಶೈಕ್ಷಣಿಕ ಕಥನವೇ ಬದುಕು ಚೈತ್ರದ ತಿರುಳಾಗಿದೆ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಅಭಿಪ್ರಾಯಿಸಿದರು.  

ಇಲ್ಲಿನ ಮಂಜಪ್ಪ ಹಡೇ9ಕರ ಸ್ಮಾರಕ (ಎಂ.ಎಚ್‌.ಎಂ.)ಕಲಾ, ವಾಣಿಜ್ಯ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಅಂತಿಮ ವರ್ಷದ ಕಲಾ,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಯುವಕರಲ್ಲಿ ನೈತಿಕ ಮೌಲ್ಯಗಳ ಸ್ಥೈರ್ಯ ಹೆಚ್ಚಾಗಬೇಕು ಎಂದರು.  

ವಿದ್ಯಾರ್ಥಿ ದಿಸೆಯಲ್ಲಿಯೇ ಚಾರಿತ್ರಿಕ ಗುರಿ, ಆಚಲ ಛಲಭಾವ, ಆತ್ಮವಿಶ್ವಾಸ ಸ್ಥೈರ್ಯವುಳ್ಳ ಮನೋಬಲ ಹೊಂದಬೇಕು. ನಿರಂತರವಾಗಿ ಅಧ್ಯಯನ, ಪ್ರಯತ್ನ ಶೀಲತೆಯಲ್ಲಿ ತನ್ಮಯರಾಗಬೇಕು. ಜ್ಞಾನದಾಹ ಇಂಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡರೆ ಖಂಡಿತ ಈ ಯಾಂತ್ರಿಕ, ಮಾಂತ್ರಿಕ ಬದುಕಿನಲ್ಲಿ ಯಶಸ್ಸು ಲಭಿಸಲು ಸಾಧ್ಯವಾದೀತು ಎಂದರು.  

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಯಮತೆಯ ಪ್ರಭುತ್ವ ಸಾಧಿಸಿದರೆ ಅಜ್ಞಾನದಿಂದ ಸುಜ್ಞಾನ ಕಡೆಗೆ ಸಾಗಬಹುದು.ಪದವಿ ಶಿಕ್ಷಣದ ಘಟ್ಟ ನಿಮ್ಮ ಜೀವಮಾನ ರೂಪಿಸುತ್ತದೆ. ಕಾರಣ ಜ್ಞಾನದ ಮೂಲಕ ನಯ, ವಿನಯ, ನಮ್ರತಾಯ ನಮ್ಯತೆ ಯುವಕರು ಕಾಣಬೇಕು ಎಂದರು.  

ಕಾರ್ಯಕ್ಷಮತೆಯ ಗುಣಸ್ವಭಾವ ಜೊತೆಗೆ ಸಂಸ್ಕೃತಿ, ಸಂಸ್ಕಾರಯುಳ್ಳ ಸಚ್ಚಾರಿತ್ರ್ಯ ವ್ಯಕ್ತಿತ್ವದಿಂದ ಆದರ್ಶಪ್ರಾಯ ಸತ್ಪ್ರಜೆಗಳಾಗಿ ವಿದ್ಯಾರ್ಥಿಗಳು ಮಿನುಗಬೇಕು. ಸೂಕ್ತ, ಶ್ರೇಷ್ಠತೆ ಅಂಶವುಳ್ಳ ವಿವೇಚನೆಗಳೇ ಸುಗಂಧ ಭರಿತ ಉತ್ತಮ ಚಹರೆಗಳನ್ನು ಸಮಾಜಕ್ಕೆ ಪರಿಚಯಿಸುತ್ತವೆ. ಧ್ಯಾನ ಬಲ ಜ್ಞಾನ ವೃದ್ಧಿಗೆ ಸಹಕರಿಸುತ್ತದೆ. ರಚನಾತ್ಮಕ, ಭಾವನಾತ್ಮಕ ದೃಷ್ಟಿಯಿಂದ ಬುದ್ಧಿವಂತಿಕೆ ಬೆಳೆಸಿಕೊಂಡು ಜೀವನ ರಂಗದಲ್ಲಿ ಮುನ್ನಡೆ ಸಾಧಿಸಬೇಕು. ಓದು, ಬರಹದ ಜ್ಞಾನಾರ್ಜನೆಯೇ  ವಿದ್ಯಾರ್ಥಿಗಳಿಗೆ ದೊಡ್ಡ ಶಕ್ತಿ. ಫ್ಯಾಷನ್ ಲೋಕದ ಇಂದಿನ ಯುವಪೀಳಿಗೆಗೆ ನಾಗರಿಕ ವರ್ತನೆ ಅತ್ಯಗತ್ಯ ಎಂದು ಪ್ರಭುಸ್ವಾಮಿ ಹೇಮಗಿರಿಮಠ ಅಭಿಪ್ರಾಯಿಸಿದರು.  

ತೋಂಟದ ಡಾ. ಸಿದ್ದಲಿಂಗ ಪೂಜ್ಯರ ಕೃಪೆಯಿಂದ ಮೂಡಿದ ಶಿಕ್ಷಣ ಬೆಳಕು : ರಾಜ್ಯದ ಹಲ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಬದುಕಿನಲ್ಲಿ ಗದುಗಿನ ತೋಂಟದ ಲಿಂ, ಡಾ.ಸಿದ್ದಲಿಂಗ ಮಹಾಸ್ವಾಮಿಗಳವರು ಜ್ಞಾನ ದೀವಿಗೆಯ ಅಮೂಲ್ಯ ಬೆಳಕು ತೋರಿದ್ದಾರೆ. ಸದ್ದಿಲ್ಲದೆ ಶೈಕ್ಷಣಿಕ ಕ್ರಾಂತಿ ಹರಡುವಂತೆ ಮಾಡಿದ್ದಾರೆ. ಪೂಜ್ಯರ ಶೈಕ್ಷಣಿಕ ಕಾಳಜಿಯಿಂದ ಆಲಮಟ್ಟಿ ಸೇರಿದಂತೆ ಹಲವಾರು ಗ್ರಾಮಾಂತರ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಸಹಸ್ರಾರು ಮಕ್ಕಳಿಗೆ ಶಿಕ್ಷಣ ದಾಸೋಹದ ಸವಿರುಚಿ ಉಣಬಡಿಸಿದ್ದಾರೆ. ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸುಸಜ್ಜಿತ ಶಾಲಾ, ಕಾಲೇಜುಗಳ ಕಟ್ಟಡ ನಿರ್ಮಿಸಿ ಶೈಕ್ಷಣಿಕ ಹಿತ ಕಾಪಾಡಿದ್ದಾರೆ. ಅದನ್ನು ಈಗ ತೋಂಟದ ಡಾ, ಸಿದ್ದರಾಮ ಶ್ರೀಗಳವರು ಸುವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಿಕೊಂಡು ದಿವ್ಯ ಜ್ಞಾನದ ಶೈಕ್ಷಣಿಕ ಪ್ರಣತೆಯ ಜ್ಯೋತಿಯನ್ನು ಬೆಳಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಜೊತೆಗೆ ಶಿಕ್ಷಣ, ಸಮಾಜಸೇವೆಗೆ ಸಮರ​‍್ಿತವಾಗಿರುವ ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಶಿಕ್ಷಣ ತಜ್ಞ ಪ್ರೊ, ಶಿವಾನಂದ ಪಟ್ಟಣಶೆಟ್ಟರ ಅವರ ವಿಶಿಷ್ಟ ಕಲ್ಪನೆಯ ವಿಧಾನಗಳಿಂದ ಗದುಗಿನ ಜೆಟಿವಿಪಿ ಹಾಗೂ ಆಲಮಟ್ಟಿ ಎಸ್‌.ವಿ.ವಿ ಶಿಕ್ಷಣ ಸಂಸ್ಥೆಗಳಿಂದು ಶೈಕ್ಷಣಿಕವಾಗಿ ವಿಶೇಷ ಸ್ಥಾನಮಾನದ ಅನ್ವೇಷಣೆಗೊಳ್ಳಪಟ್ಟಿವೆ. ಇಂಥ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಣವಂತರು ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ತಮ್ಮ ಮನದಾಳದ ಭಾವಗಳನ್ನು ಹಂಚಿಕೊಂಡರು.  

ಮುಖ್ಯ ಅತಿಥಿ ಹಳಕಟ್ಟಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾತನಾಡಿ, ಸಾಧನೆ ಇಲ್ಲದ ಜೀವನಕ್ಕೆ ಸಮಾಜದಲ್ಲಿ ಮೌಲ್ಯ ಸಿಗದು.ಇದಕ್ಕೆ ಬೇಕು ಸ್ವಯಂ ಪ್ರಯತ್ನಭಾವದ ಅವಿರತ ಕಠಿಣ ಪರಿಶ್ರಮ ಜೊತೆಗೆ ಶೈಕ್ಷಣಿಕ ಜೀವನದ ಸವಾಲುಗಳನ್ನು ಏಕಾತನಯದಿಂದ ಎದುರಿಸಿ ಗೆಲ್ಲುವ ಮನೋಇಚ್ಚೆ ವಿದ್ಯಾರ್ಥಿಗಳು ಕಾಣಬೇಕು ಎಂದರು.   

ಉಪನ್ಯಾಸಕ ಪ್ರಕಾಶ ಧನಶೆಟ್ಟಿ, ಪ್ರಾಧ್ಯಾಪಕ ಕುಂದರಗಿ ವೇದಿಕೆಯಲ್ಲಿದ್ದರು. ಅಂಬಿಕಾ ಇಟಗಿ, ಭಾಗ್ಯಶ್ರೀ ಸರಗಣಾಚಾರಿ, ಸುರೇಶ ಹೆಡ್ಟ್ಜೊಲ್, ಆರ್‌.ನಾಯಕ, ಪ್ರಭು ಕಲಗೊಂಡ ಪ್ರಾಧ್ಯಾಪಕರು ಸೇರಿದಂತೆ ಇತರರಿದ್ದರು.  

ಉಪನ್ಯಾಸಕ ಮಂಜುನಾಥ ಪಾಟೀಲ ನಿರೂಪಿಸಿದರೆ ಎಚ್‌.ಎಸ್‌.ಹೊಸಮನಿ ಉಪನ್ಯಾಸಕರು ವಂದಿಸಿದರು.