ವಿವಿಧ ಸ್ವಸಹಾಯ ಸಂಘಕ್ಕೆ 5ಲಕ್ಷ ರೂ ಸಾಲದ ಚೆಕ್ ವಿತರಸಿ

Distribute loan cheques of Rs 5 lakh to various self-help groups

ಲೋಕದರ್ಶನ ವರದಿ 

ವಿವಿಧ ಸ್ವಸಹಾಯ ಸಂಘಕ್ಕೆ 5ಲಕ್ಷ ರೂ ಸಾಲದ ಚೆಕ್ ವಿತರಸಿ 

ಸಂಬರಗಿ, 29 : ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘವು ಸದೃಢವಾಗಿ ವಿವಿಧ ಉದ್ಯೋಗಗಳನ್ನು ಪ್ರಾರಂಭ ಮಾಡಲು ಅನುಕೂಲವಾಗುತ್ತದೆ. ಆ ಉದ್ಯೋಗದಿಂದ ಪಡೆದಿರುವ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಜೈಹನುಮಾನ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು ಮಹಾದೇವ ಕೋರೆ ಹೇಳಿದರು.  

ಮದಬಾವಿ ಗ್ರಾಮದಲ್ಲಿ ಸಂಘದ ವತಿಯಿಂದ ವಿವಿಧ ಸ್ವಸಹಾಯ ಸಂಘಕ್ಕೆ 5 ಲಕ್ಷ ರೂಪಾಯಿ ಸಾಲದ ಚೆಕ್ ವಿತರಸಿ ಮಾತನಾಡಿ ಅವರು ಸಂಘದಿಂದ ಚಿಕ್ಕ ಉದ್ಯಮಿದಾರರು ಸ್ವಸಹಾಯ ಸಂಘ ಇಂತವರಿಗೆ ಸಾಲ ನೀಡಿ ಆ ಸಂಘವನ್ನು ಸದೃಢ ಮಾಡುವ ಗುರಿ ಹೊಂದಿದೆ. ಇಲ್ಲಿಯವರೆಗೆ 5 ಸಂಘಕ್ಕೆ ನಾವು ಸಾಲ ನೀಡಿದ್ದೇವೆ. ಆ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಆಗುತ್ತಿದೆ. ಸಂಘದಿಂದ ಜನರಿಗೆ ಅನುಕೂಲವಾಗಿದೆ. ರೈತರಿಗೆ ಟ್ಯ್ರಾಕ್ಟರ್ ಸಾಲ, ಬೆಳೆ ಸಾಲ ನೀಡಿ ರೈತರಿಗೆ ಅನುಕೂಲ ಮಾಡಿದ್ದೇವೆ. ಈ ಸುತ್ತ-ಮುತ್ತ ಗ್ರಾಮದಲ್ಲಿ ಇರುವ ಚಿಕ್ಕ ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದೆವೆ. ಎಲ್ಲರ ಸಹಕಾರದಿಂದ ಸಂಘವು ಅಭಿವೃದ್ಧಿಯಿಂದ ಮುನ್ನಡೆಯಲ್ಲಿದೆ. 

ಈ ವೇಳೆ ನಿರ್ದೇಶಕರಾದ ಹಣಮಂತ ತೊಡಕರ, ವಿಜಯಾನಂದ ಮೇತ್ರಿ, ದಾದಾಸಾಬ ಮೇತ್ರಿ, ಉಮೇಶ ಪಾಟೀಲ, ಕುಮಾರ ಕೋರೆ, ಗೋಪಾಲ ಅವಳೆಕರ ಇನ್ನೀತರು ಉಪಸ್ಥಿತರಿದ್ದರು. ಸಂಘದ ಉಖ್ಯ ಕಾರ್ಯನಿರ್ವಾಹಕರು ಪರಶುರಾಮ ಬಾಗಿ ಸ್ವಾಗತ ವಂದಿಸಿದರು.