ಮಕ್ಕಳ ಲಾಲನೆ ಪಾಲನೆ ಮಾಡುವಲ್ಲಿ ಬೇದ ಬಾವ ಮಾಡಬೇಡಿ : ದೇವರಾಜ್ ಸಜ್ಜನಶೆಟ್ಟರ ರೋಣದಲ್ಲಿ 7 ದಿನಗಳ ಕಾಲ ಕೂಸಿನ ಮನೆ ಆರೈಕೆದಾರರ ತರಬೇತಿ
ರೋಣ 07 : ಕೂಸಿನ ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವುದು ನಿಮ್ಮ ಕರ್ತವ್ಯ ಆಗಿರುತ್ತದೆ ಈ ಸಂದರ್ಭದಲ್ಲಿ ಯಾವುದೇ ಬೇದಭಾವ ಮಾಡದೇ ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಅಂತಾ ರೋಣ ತಾಲೂಕ ಪಂಚಾಯತ ವ್ಯವಸ್ಥಾಪಕರಾದ ದೇವರಾಜ್ ಸಜ್ಜನಶೆಟ್ಟರ ಅಭಿಮತ ವ್ಯಕ್ತ ಪಡಿಸಿದರುರೋಣ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಇಂದಿನಿಂದ 7 ದಿನಗಳ ಕಾಲ ಕೂಸಿನ ಮನೆ ಆರೈಕೆದಾರರ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ತರಬೇತಿ ಪಡೆದಿರುವ ಕೂಸಿನ ಮನೆಯ ಆರೈಕೆದಾರರು ತಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವಲ್ಲಿ ಶ್ರಮಿಸಬೇಕು. ಕೂಸಿನ ಮನೆಯಲ್ಲಿ ಮಕ್ಕಳಿಗೆ ನೀಡುವ ಬಗ್ಗೆ ಸುರಕ್ಷತೆ ವಹಿಸಿ ಮಕ್ಕಳ ಸುರಕ್ಷತೆ ಜೊತೆಗೆ ಮಕ್ಕಳ ಪಾಲಕರಲ್ಲೂ ಕೂಸಿನ ಮನೆಯ ಕಾರ್ಯಕ್ಷಮತೆಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಆರೈಕೆದಾರರು ಮಾಡಬೇಕು ಎಂದರು...ಸಮಾರಂಭದ ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಐ.ಆರಿ್ಡ ಮೈಸೂರು ಸಂಸ್ಥೆಯ ಬೋದಕರಾದ ಮಲ್ಲಿಕಾರ್ಜುನ ಸ್ವಾಮಿ ಕೂಸಿನ ಮನೆಯ ಆರೈಕೆದಾರರು ಕೇವಲ ವೇತನಕ್ಕಾಗಿ ದುಡಿಯದೇ ಮಕ್ಕಳ ಸೇವೆಯನ್ನು ಮಾಡುತ್ತಿದ್ದೆವೆಂದು ತಿಳಿದು ಕೆಲಸ ಮಾಡಬೇಕು ಎಂದರು. ಅಲ್ಲದೆ ನರೇಗಾ ಕೂಲಿಕಾರರ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯವನ್ನು ಆರೈಕೆದಾರರು ಮಾಡಬೇಕು ಆತ್ಮವಿಶ್ವಾಸದಿಂದ ಕೂಸಿನ ಮನೆಯನ್ನು ಆರೈಕೆದಾರರು ನಿರ್ವಹಿಸಬೇಕು. ಗ್ರಾಮಸ್ಥರ ಮತ್ತು ನರೇಗಾ ಕೂಲಿಕಾರರಲ್ಲಿ ಕೂಸಿನ ಮನೆಯ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಿದ್ದೇಆದಲ್ಲಿ ಕೂಸಿನ ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು...ಕಾರ್ಯಕ್ರಮ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಲಲಿತಾ.ಎಸ್.ಅಳವಂಡಿ, ಸರೋಜ.ಬಡಿಗೇರ, ತಾಲೂಕ ಸಂಯೋಜಕ ಶರಣಪ್ಪ.ಕೊತಬಾಳ ಹಾಗೂ ವಿಷಯ ನಿರ್ವಾಹಕ ಎಚ್.ಕೆ.ದೇಸಾಯಿ ಉಪಸ್ಥಿತರಿದ್ದರು ಮತ್ತು ರೋಣ,ನರಗುಂದ ಹಾಗೂ ಗಜೇಂದ್ರಗಡ ತಾಲೂಕಿನ ಕೂಸಿನ ಮನೆಗಳ ಆರೈಕೆದಾರರು ತರಬೇತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.