ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿಯಿಂದ ಡಾ.ರಾಜ್ಕುಮಾರ್ ಮತ್ತು ಪಿ.ಬಿ.ಶ್ರೀನಿವಾಸ್ ಸುನಾದಯಾನ ಕಾರ್ಯಕ್ರಮ
ಬೆಳಗಾವಿ 28: ಡಾ. ರಾಜಕುಮಾರ ಅವರು ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರ ಸೌಜನ್ಯ ಬೇರೆಯವರಿಗೆ ಮಾದರಿ ಎಂದು ಡಾ.ಮುರುಗೇಶ್ ಬಾಬು ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಮತ್ತು ಕನ್ನಡ ಭವನದ ಸಹಯೋಗದಲ್ಲಿ ವರನಟ ಡಾ.ರಾಜ್ಕುಮಾರ್ ಅವರ 96ನೇ ಜನ್ಮದಿನ ಆಚರಣೆ ಮತ್ತು ಪಿ.ಬಿ.ಶ್ರೀನಿವಾಸ್ ಅವರ ಸವಿನೆನಪಿನ ನಿಮಿತ್ತ ಆಯೋಜಿಸಲಾದ ಸುನಾದಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ರಾಜ್ಕುಮಾರ್ ಅವರನ್ನು ಅಭಿಮಾನಿಗಳು ನೆನೆಯದ ದಿನವಿಲ್ಲ. ಅವರ ಆದರ್ಶ, ನಿಲುವು, ವಿನಯತೆ ನಮ್ಮೆರಿಗೂ ಸ್ಪೂರ್ತಿ ಎನ್ನುತ್ತ, ಡಾ.ರಾಜ್ ರವರೊಂದಿಗೆ ಇರುವ ನಿಕಟ ಸಂಬಂಧವನ್ನು ನೆನಪಿಸಿಕೊಂಡರು.
ಚಾರಿತ್ರಿಕ ಕಾದಂಬರಿಕಾರರಾದ ಯ.ರು.ಪಾಟೀಲರ ಅವರು ಮಾತನಾಡಿ, ಡಾ.ರಾಜ್ ರವರು ಕನ್ನಡದ ವಿಸ್ಮಯ, ನಮ್ಮ ಸಂಸ್ಕೃತಿ, ನಮ್ಮತನವನ್ನು ಬೆಳೆಸುವ ದಿಟ್ಟತನ ಹೊಂದಿದ್ದ ಮೇರುನಟ ಡಾ. ರಾಜಕುಮಾರ ಅವರು ಕಲೆಯನ್ನು ಉಸಿರಾಗಿಸಿಕೊಂಡವರು. ಅವರ ಸ್ಫೂರ್ತಿ ಹಾಗೂ ಪ್ರೇರಣೆಯಿಂದ. ಶ್ರೀ ಕೃಷ್ಣ ದೇವರಾಯ, ಮಯೂರ, ಭಕ್ತ ಕುಂಬಾರ ಮರೆಯಲಾರದ ಪಾತ್ರಗಳು ಎಂದರು.
ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ರಾಜ್’ಕುಮಾರ್ ಅವರ ಮೊಮ್ಮಗಳಾದ ಸರಸ್ವತಿ ಕೋಸಗಿ ಅವರು ಮಾತನಾಡಿ, ಸಂಗೀತದಲ್ಲಿ ತಾತನನ್ನು ನೋಡಿ ಅಭಿರುಚಿಯನ್ನು ಬೆಳೆಸಿಕೊಂಡಿರುವೆ. ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯನ್ನೇ ನಮ್ಮ ತಾತನ ಧ್ವನಿ ಎಂದುಕೊಂಡಿದ್ದೇವು. ಈ ಇಬ್ಬರ ಧ್ವನಿಯೂ ತುಂಬ ಮನಮೋಹಕ, ಇಬ್ಬರು ದಿಗ್ಗಜ ಕಲಾವಿದರೂ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವರದಾನ ಕೊಸಗಿ ಅವರು, ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಈ ವೇಳೆ ರಾಜೇಶ್ವರಿ ಹಿರೇಮಠ ಅವರು ನಾನೇ ಭಾಗ್ಯವತಿ ,ವಸಂತ ಕಾನೆಟ್ಕರ ಅವರು ಬೆಳ್ಳಿ ಮೂಡಿತೋ ಮತ್ತು ಮಹೇಶ ಕುಲಕರ್ಣಿ ಅವರು ಆರಾಧಿಸುವೇ ಮದನಾರಿ ಗೀತೆಗಳ ಹಾಡಿಗೆ ಪ್ರೇಕ್ಷಕರು ಪುಳಕಿತಗೊಂಡರು.
ಈ ಸಂದರ್ಭದಲ್ಲಿ ಹೇಮಾ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ವಸಂತ್ ಕಾನೆಟ್ಕರ್ ಸ್ವಾಗತಿಸಿದರು. ಬೆಳ್ಳಿಚುಕ್ಕಿ ಸಾಂಸ್ಕೃತಿಕ ಸಂಘದ ಅಧ್ಯಕ್ಷೇ ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಜಯಶ್ರೀ ನಾಯಕ ವಂದಿಸಿದರು. ಹಾಗೂ ಡಾ. ರಾಜಶೇಖರ್, ಹಿರಿಯ ಸಾಹಿತಿ ಸರಜೂ ಕಾಟ್ಕರ್, ರತ್ನಪ್ರಭಾ ಬೆಲ್ಲದ ಉಪಸ್ಥಿತರಿದ್ದರು.