ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಜಯಂತೋತ್ಸವ: ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ

Dr. Sivananda Bharathi Mahaswamiji Jayanti: Interfaith Mass Marriage Ceremony

ರಾಣಿಬೆನ್ನೂರ:22 ಮಾನವ ಜನ್ಮ ದೊರೆಯುವದೇ ದುರ್ಲಭ. ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿದೆ. ಮನುಷಯನಿಗೆ ಅರಿವಿದೆ ಮತ್ತು ಪ್ರಾಣಿಗಳಿಗೆ ಅರಿವಿಲ್ಲ. ಹಾಗಾಗಿ ಅರಿವಿನ ಜನ್ಮ ಪಡೆದ ಮನುಷ್ಯ ತನ್ನನ್ನು ತಾನು ಅರಿತು ಜೀವಿಸಬೇಕು ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾಽ ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.ಬುಧವಾರ ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಸದ್ಗುರು ಸಿದ್ಧಾರೂಢಸ್ವಾಮಿಯವರ ಜಯಂತಿ ಅಂಗವಾಗಿ ಏರಿ​‍್ಡಸಿದ್ದ 31ನೇಯ ವೇದಾಂತ ಪರಿಷತ್, ಡಾಽ ಶಿವಾನಂದ ಭಾರತಿ ಮಹಾಸ್ವಾಮಿಜಿಗಳವರ 85 ನೇಯ ಜಯಂತೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  

84 ಲಕ್ಷ ಜೀವರಾಶಿಗಳಲ್ಲಿ ಶ್ರೇಷ್ಠ ಜನ್ಮ ಪಡೆದ ಮಾನವ ಪರಬ್ರಹ್ಮ ಜ್ಞಾನವನ್ನು ಅಂತಪ್ಪ ಗುರುವಿನಿಂದ ಪಡೆದು ಜನ್ಮ ಮುಕ್ತನಾಗಬೇಕು. ಎಲ್ಲಾ ನದಿಗಳು ಒಂದೊಂದು ನಾಮ ಪಡೆದು ಭೂಮಿಯಲ್ಲಿ ಹರಿದರೂ ಸುಮುದ್ರ ಸೇರಿದ ಕ್ಷಣ ಮಾತ್ರದಲ್ಲಿ ನಾಮ ರಹಿತವಾಗಿ ನದಿಗಳು ಮುಕ್ತವಾದಂತೆ ಗುರುವಿನ ಸಂಗಮವಾದರೆ ಮನುಷ್ಯ ಜೀವನ್ಮುಕ್ತನಾಗುತ್ತಾನೆ ಎಂದು ಶ್ರೀಗಳು ನುಡಿದರು.  

ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ ಹಾಗೂ ಸಂತೃಪ್ತಿ ಮತ್ತು ಮುಕ್ತಿ ಸಿಗುವುದಿಲ್ಲ ಮನುಷ್ಯ ಮನಸ್ಸು, ಬುದ್ದಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸದ್ಗುರುವಿನ ಉಪದೇಶವನ್ನು ಆಲಿಸಿದಾಗಲೇ ಮನುಜ ಸದ್ಗತಿಯನ್ನು ಪಡೆಯಲು ಸಾಧ್ಯ ಎಂದರು. 

ಶಿವಾವತಾರಿ ಭೂಲೋಕವಾಸಿಯಾದ  ಸಿದ್ಧಾರೂಢರು ಸರ್ವ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮ ಸಿದ್ಧಾರೂಢರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ, ಅಲ್ಲದೆ ಸತ್ಸಂಗವು ಜನ್ಮಜನ್ಮಾಂತರ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದು ಡಾ,ಭಾರತಿ ಶ್ರೀಗಳು ನುಡಿದರು. 

ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಮಹಾಸ್ವಾಮಿಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು, ಹುಬ್ಬಳ್ಳಿಯ ಸಚ್ಚಿದಾನಂದ ಶ್ರೀಗಳು, ದಾವಣಗೇರಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಮುರಳಿಧರ ಶ್ರೀಗಳು, ಗೋಕಾಕ ತಾಲೂಕ ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು ನಿಜಗುಣ ಶಿವಯೋಗಿಗಳ ಪದ್ಯದ ಒಂದು ಚರಣ ‘ನರಜನ್ಮದಿಂದಹದೋಳ ನಿಗಿಲುಂಟೆ”  ಕುರಿತು ಉಪದೇಶಾಮೃತ ನೀಡುವರು. 

ಬ್ರಾಹ್ಮಿ ಮುಹೂರ್ತದಲ್ಲಿ ಸಿದ್ಧಾರೂಢರ ಪಂಚಲೋಹದ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಪೂಜಾ ವಿಧಾನಗಳನ್ನು ಚನ್ನಯ್ಯ ಶಾಸ್ತ್ರೀ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರಿಂದ ಶ್ರೀಗಳವರ ಸನ್ಮಾನ ಹಾಗೂ ದಾವಣಗೇರಿಯ ಬಾಪೂಜಿ ಮೆಡಿಕಲ್ ಕಾಲೇಜ ಪ್ರೊಽ ಡಾಽ ಎಂ.ಸುನಿತಾ, ಕರೂರ ಗ್ರಾಮದ ಶೀಲಮ್ಮ ಜನಾರ್ಧನ ಕಡೂರ, ಮಾಕನೂರ ಗ್ರಾಮದ ಭಾಗ್ಯಮ್ಮ ಗಂಗಪ್ಪ ದೊಡ್ಡಕುರಬರ, ನಂದಿಗಾವಿಯ ವಿನುತಾ ಎನ್‌.ಎಂ  ಕುಟುಂಬದವರಿಂದ ಡಾಽ ಶಿವಾನಂದ ಭಾರತಿ ಶ್ರೀಗಳವರ ತುಲಾಬಾರ ನೆರವೇರಿಸಿದರು. ನಂತರ ಸಾಮೂಹಿಕ ವಿವಾಹದಲ್ಲಿ ನವದಂಪತಿಗಳು ದಾಂಪತ್ಯ ಜೀವನಕ್ಕೆ ಪಾದಾರೆ​‍್ಣ ಮಾಡಿದರು.   

ಉಪಸಭಾಪತಿ ಹಾಗೂ ಶ್ರೀಮಠದ ಕಾರ್ಯದರ್ಶಿ ರುದ್ರ​‍್ಪ ಲಮಾಣಿ, ಗ್ರಾಪಂ ಅಧ್ಯಕ್ಷೆ ಲಲಿತಾ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪ್ರಜಾರ, ಶ್ರೀಮಠದ ಅಧ್ಯಕ್ಷ ಫಕ್ಕೀರ​‍್ಪಗೌಡ್ರ, ಜನಾರ್ಧನ ಕಡೂರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ,  ಅರುಣಸ್ವಾಮಿ ಹಿರೇಮಠ, ಡಾಕೇಶ ಲಮಾಣಿ, ಗುರುಶಾಂತ ಬಾಗಿಲದವರ, ಶಿವಣ್ಣ ಬಣಕಾರ, ಗೋಪಾಲ ಕೊಡ್ಲೇರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ ಚನ್ನಗೌಡ್ರ ಮತ್ತಿತರರು ಇದ್ದರು.