ಬೆಳಗಾವಿ 28: ಕೆ ಎಲ್ ಎಸ್ ಸಂಸ್ಥೆಯ ರಾಜಾ ಲಖಮ ಗೌಡ ಕಾನೂನು ವಿದ್ಯಾಲಯದ ಆಂತರಿಕ ಗುಣಾತ್ಮಕ ಖಾತರಿ ಕೋಶ (ಋಂಅ) ವಿಭಾಗವು ಕಾಲೇಜಿನ ಉತ್ತಮ ಕಾರ್ಯಪ್ರಣಾಳಿಕೆಗಳಲ್ಲಿ ಒಂದಾಗಿ ಫ್ಯಾಕಲ್ಟಿ ವಿದ್ಯಾರ್ಥಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಫ್ಯಾಕಲ್ಟಿ ವಿದ್ಯಾರ್ಥಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸಂವಹನ ಮತ್ತು ವಿಷಯ ಜ್ಞಾನವನ್ನು ವೃದ್ಧಿಸುತ್ತದೆ. ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಕಾಲೇಜಿನಲ್ಲಿ ಆಯೋಜಿಸಲಾಗುತ್ತದೆ. ಉನ್ನತ ಸೆಮಿಸ್ಟರ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿರಿಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಾರೆ.
ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್, ಋಂಅ ಸಂಯೋಜಕ ಸಮೀನಾ ನಾಹಿದ್ ಬೈಗ್ ಮತ್ತು ಕಾಲೇಜಿನ ಸಿಬ್ಬಂದಿ ಬೆಂಬಲಿಸುತ್ತಿದ್ದಾರೆ.