ಸರ್ಕಾರಿ ವಾಹನ ಚಾಲಕ ನಾಗರಾಜ ಅವರಿಗೆ ಬೀಳ್ಕೊಡುಗೆ

Farewell to government vehicle driver Nagaraja

ಬಳ್ಳಾರಿ  29:   ಜಿಲ್ಲೆಯ ಅಂಕಿ-ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ವಾಹನ ಚಾಲಕರಾದ ನಾಗರಾಜ ಅವರು ವಯೋ ನಿವೃತ್ತಿ ಹೊಂದಿದ ಕಾರಣ, ನಗರದ ಡಾ.ರಾಜ್ ಕುಮಾರ್ ರಸ್ತೆಯ ನೂತನ ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಮಂಗಳವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಂಕಿ-ಸಂಖ್ಯಾ ಸಂಗ್ರಹಣಾಧಿಕಾರಿಗಳಾದ  ಪತ್ರಿ ಬಸಪ್ಪ ಎನ್‌.ಕೆ, ಪ್ರಥಮ ದರ್ಜೆ ಸಹಾಯಕಿ   ವಾಣಿ ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಸರ್ಕಾರಿ ವಾಹನ ಚಾಲಕ ಸಂಘದ ಅಧ್ಯಕ್ಷ ಶ್ರೀನಿವಾಸ ಮತ್ತು ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ವೈ ’ ಇತರರು ಉಪಸ್ಥಿತರಿದ್ದರು.