ಮಹಾಲಿಂಗಪುರ, 23: ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಸದಾಶಿವ ಎಂಬ ರೈತನ ಮಗ ಪಾಂಡುರಂಗ ಕಂಬಳಿ ಕೇಂದ್ರಿಯ ಯುಪಿಎಸ್ ಸಿ ಪರೀಕ್ಷೆಯ ಆಯ್. ಎ. ಎಸ್ ನಲ್ಲಿ 529 ನೇ ಯಾಂರ್ಕ್ ಪಡೆಯುವ ಮೂಲಕ ಜಿಲ್ಲೆಗೆ ಮತ್ತು ಹುಟ್ಟಿದ ಊರಿಗೆ ಕೀರ್ತಿ ತಂದಿದ್ದಾರೆ.
ತಂದೆ ಸದಾಶಿವ ಅವರ ಓದು ಕೇವಲ ಎ??????ಲ್ಸಿ ನಂತರದ ಬದುಕು ಒಕ್ಕಲುತನದಲ್ಲಿಯೇ ಮುಂದುವರಿದಿದೆ. ನಾನು ಕಲಿತು ಹೆಚ್ಚಿನ ಸಾಧನೆ ಮಾಡಲಿಕ್ಕೆ ಆಗಲಿಲ್ಲ. ನನ್ನ ಮಕ್ಕಳಾದರೂ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಪರಿವಾರ ಮತ್ತು ಊರಿಗೆ ಹೆಸರು ತರಲಿ ಎಂಬ ಉದ್ದೇಶದಿಂದ ಮೂವರು ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸಿ ಪಾಲಕರ ಕರ್ತವ್ಯ ಮೆರೆದಿದ್ದಾರೆ. ಒಬ್ಬ ಮಗ ಇಂಜಿನಿಯರಿಂಗ್ ಮತ್ತು ಓರ್ವ ಮಗಳು ಉತ್ತಮ ಶಿಕ್ಷಣ ಮುಂದುವರಿಸಿದ್ದಾರೆ.
ಸೈದಾಪುರ ಗ್ರಾಮದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ, 6 ರಿಂದ 10 ನೇ ತರಗತಿ ವರೆಗೆ ಬಾದಾಮಿ ತಾಲ್ಲೂಕಿನ ಕುಳಗೇರಿ ನವೋದಯ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ರಬಕವಿ-ಬನಹಟ್ಟಿ ಸಮೀಪದ ಕೊಣ್ಣೂರ ಕಾಲೇಜ್ ನಲ್ಲಿ ಪಿಯುಸಿ ಸೈನ್ಸ್ ಅಭ್ಯಾಸ.
ನಂತರ ಬೆಂಗಳೂರಿನ ಆರ್ ವಿ ಕಾಲೇಜನಲ್ಲಿ ಎಂಜನಿಯರ್ (ಇ್ಘಅ) ಪದವಿ.ಎರಡ್ಮೂರು ವರ್ಷ ಗಳ ಹಿಂದೆ ಯುಪಿಎಸ್ಸಿಗಾಗಿ ತಯಾರಿ.ಮೂರನೇ ಬಾರಿಗೆ ಇಂಟರ್ ವ್ಯೂವ್ ಹಂತದವರೆಗೆ ತೆರಳಿ ಪಾಸ್. ಐದು ಸಾರಿ ಪ್ರಿಲಿಮ್ಸ್ ಪಾಸ್ ಆಗಿದ್ದ ಪಾಂಡುರಂಗ.ದೆಹಲಿ ವೈಜಾರಾಮ್ ಕೇಂದ್ರದಲ್ಲಿ ತರಬೇತಿ.
ಈ ಸಂದರ್ಭದಲ್ಲಿ ಅವರ ಈ ಸಾಧನೆಗೆ ಅಕ್ಕಿಮರಡಿಯ ಸರ್ವರು, ನಾಗರಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಖಂಡರು ಮತ್ತು ವ್ಯಾಪ್ತಿಯ ನಾಗರಿಕರು ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.