ಕಳೆಪೆ ಬೀಜ ಪೂರೈಕೆ ಆರೋಪಿಸಿ ರೈತ ಸಂಘ ಪ್ರತಿಭಟನೆ
ಬ್ಯಾಡಗಿ 21: ಕಳೆಪೆ ಬೀಜಗಳನ್ನು ಪೂರೈಕೆ ಮಾಡಿ ರೈತರಿಗೆ ಮೋಸ ಮಾಡಿದ ಕಂಪನಿ ಹಾಗೂ ಮಾರಾಟ ಮಾಡಿದ ಅಂಗಡಿಯವರಿಂದ ಪರಿಹಾರ ಒದಗಿಸಿ ಕೊಡುವಂತೆ ಆಗ್ರಹಿಸಿ ಬುಧವಾರ ಪಟ್ಟಣದ ಶಾಸಕರ ಕಾರ್ಯಾಲಯದ ಎದುರು ತಾಲೂಕಾ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ತಾಲೂಕಿನ ಬಡಮಲ್ಲಿ, ಹಿರೇಹಳ್ಳಿ, ಚಿಕ್ಕಳ್ಳಿ ಗ್ರಾಮಗಳ ರೈತರು ಬೇಸಿಗೆ ಹಂಗಾಮಿನಲ್ಲಿ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಿದ್ದು, ಮೆಣಸಿನ ಕಾಯಿ ಗಿಡಗಳು ಬೆಳೆದು ದೊಡ್ಡವಾಗಿದ್ದರೂ ಯಾವುದೇ ಗಿಡಗಳಲ್ಲಿ ಹೂವು ಕಾಯಿ ಬಿಡದೇರೈತರಿಗೆ ಸಾಕಷ್ಟು ಹಾನಿಯಾದ ಹಿನ್ನೆಲೆಯಲ್ಲಿ ಬೀಜ ಕಂಪನಿಯಾದ ಹೈದರಾಬಾದ್‌ಧನ್ ಕ್ರಾಫ್ ಹಾಗೂ ಸನ್ಸ್ ಪ್ರೈ ಕಂಪನಿ ಮತ್ತು ಮಾರಾಟ ಮಾಡಿದ ಅಂಗಡಿಯವರಿಂದ ಪರಿಹಾರ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಇತರೇ ಅಧಿಕಾರಿಗಳು ರೈತರಿಗೆ ನೀಡಿದ್ದು, ಆದರೇ ಇವರೆಗೂ ರೈತರಿಗೆ ಪರಿಹಾರ ನೀಡದೇ ಏನೇನೋ ಸಬೂಬು ಹೇಳುತ್ತಾ ಕಾಲ ತಳ್ಳುತ್ತಿರುವುದನ್ನು ಖಂಡಿಸಿದ ಅವರುರೈತರಿಗೆ ಪರಿಹಾರ ನೀಡುವವರೆಗೂತಾ.ಪಂ ಆವರಣದಲ್ಲಿರುವ ಶಾಸಕರ ಕಾರ್ಯಾಲಯದ ಎದುರು ಧರಣಿ ಮಾಡುವ ಮೂಲಕ ಪ್ರತಿಭಟನೆ ಮಾಡುವುದಾಗಿ ಹೇಳಿದರಲ್ಲದೇ ಇಂದು ನಡೆದ ಪ್ರತಿಭಟನೆಗೆ ಯಾವುದೇ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಬಾರದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ಧರಣಿ ಸತ್ಯಾಗ್ರಹ ಮುಂದೂಡಿದರು. ಧರಣಿ ಸತ್ಯಾಗ್ರಹದಲ್ಲಿ ರುದ್ರಗೌಡ ಕಾಡನಗೌಡ್ರ ಗಂಗಣ್ಣ ಎಲಿ,ಮೌನೇಶಕ ಮ್ಮಾರ, ಜಾನ್ ಪುನೀತ್, ಕೆ.ವಿ.ದೊಡ್ಡಗೌಡ್ರ ಸೇರಿದಂತೆ ಇತರರಿದ್ದರು.