ರೈತರಿಗೆ ಅಗತ್ಯ ಪರಿಕರಗಳನ್ನು ನ್ಯಾಯಯುತವಾಗಿ ಒದಗಿಸಬೇಕು
ರಾಣೇಬೆನ್ನೂರು 21: ರೈತರು ಈ ದೇಶದ ಬೆನ್ನೆಲುಬು ಸಾರ್ವತ್ರಿಕವಾಗಿ ಅನ್ನ ನೀಡುವ ರೈತರಿಗೆ ಯಾವುದೇ ರೀತಿಯಲ್ಲಿ ಕೃಷಿ ಪರಿಕರಗಳು ತೊಂದರೆಯಾಗದೆ ದೊರಕಿಸುವ ಉದ್ದೇಶದಿಂದ ಇಲಾಖೆ ಸಮರ್ಕವಾಗಿ ತನ್ನ ಕಾರ್ಯ ನಿರ್ವಹಿಸುತ್ತಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ಶಾಂತಮಣಿ ಜಿ. ಹೇಳಿದರು. ಅವರು, ಮಂಗಳವಾರ ಕೃಷಿ ಇಲಾಖೆ ಭವನದಲ್ಲಿ ಆಯೋಜಿಸಲಾಗಿದ್ದ, ತಾಲೂಕಾ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಎಲ್ಲಾ ರೀತಿಯ ಪರಿಕರಗಳನ್ನು ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಸಮರ್ಕವಾಗಿ ಒದಗಿಸಲು ಮುಂದಾಗಬೇಕು. ಅಲ್ಲದೆ ತಮ್ಮ ತಮ್ಮ ಅಂಗಡಿಗಳಲ್ಲಿ ದರಪಟ್ಟಿ ಅಳವಡಿಸಿ ಕಾರ್ಯದರ್ಶಿಕವಾಗಿ, ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಅವರು ದಾಸ್ತಾನು ವಿವರ, ದರ ಪಟ್ಟಿ ಅಳವಡಿಸಿಕೊಳ್ಳಲು ಮುಂದಾಗಬೇಕು ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯ ಅತಿಥಿಯಾಗಿದ್ದ ರೈತ ಸಂಘದ ರಾಜ್ಯ ಕಾರ್ಯದರ್ಶಿ, ರವೀಂದ್ರ ಗೌಡ ಪಾಟೀಲ್ ಅವರು, ರೈತರು ಮತ್ತು ಪರಿಕರಗಳ ಮಾರಾಟಗಾರರು ಎರಡು ಮುಖದ ಒಂದು ನಾಣ್ಯ. ಪರಸ್ಪರ ಪ್ರೀತಿ ವಿಶ್ವಾಸ, ಮತ್ತು ಗುಣಮಟ್ಟದ ಬೀಜ, ಗೊಬ್ಬರ ರಸಗೊಬ್ಬರ ಸೇರಿದಂತೆ ಅಗತ್ಯ ಪರಿಕರಗಳನ್ನು ನ್ಯಾಯಯುತವಾಗಿ ಒದಗಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಣ್ಣ ಹಲಗೇರಿ, ಕೃಷಿಕ ಸಮಾಜದ ಅಧ್ಯಕ್ಷ ಬಸವನಗೌಡ ಕೋಟೆಗೌಡ್ರ, ಮತ್ತಿತರರು ಮಾತನಾಡಿದರು. ಉಪ ಕೃಷಿ ನಿರ್ದೇಶಕ, ಕರಿಯಲ್ಲಪ್ಪ ಡಿ.ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೃಷಿ ಪರಿಕರ ಮಾರಾಟಗಾರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಎನ್ ಪಾಟೀಲ್, ಅವರು ಸಂಘ ನಡೆದು ಬಂದ ದಾರಿ, ಕುರಿತು ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ವೀರೇಶ್ ಜಿ.ಎಂ. ಸ್ವಾಗತಿಸಿದರು. ಕೃಷಿ ಅಧಿಕಾರಿ ಶಿವಾನಂದ ಹಾವೇರಿ ಅವರು ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ತಾಲೂಕಿನ ರೈತರು ಮಾರಾಟಗಾರ ಸಂಘದ ಪದಾಧಿಕಾರಿಗಳು ರೈತ ಮುಖಂಡರು ಪಾಲ್ಗೊಂಡಿದ್ದರು.ಊ21-ಖಓಖ01-ಓಇಘಖ. ಂಓಆ. ಫೋಟೋ.