ಪಂಚ ಗ್ಯಾರಂಟಿ ಯೋಜನೆಗಳು ಬಡತನವನ್ನು ಬುಡಸಮೇತ ನಿರ್ಮೂಲನೆಗೆ ನಾಂದಿ : ಎಸ್‌. ಆರ್‌. ಪಾಟೀಲ್‌

Five Guarantee Schemes are the beginning of eradicating poverty: S. R. Patil

ಪಂಚ ಗ್ಯಾರಂಟಿ ಯೋಜನೆಗಳು ಬಡತನವನ್ನು ಬುಡಸಮೇತ ನಿರ್ಮೂಲನೆಗೆ ನಾಂದಿ : ಎಸ್‌. ಆರ್‌. ಪಾಟೀಲ್‌

ಗದಗ 21:-  ಆಡಳಿತಾರೂಢ ಘನವ್ಯತ್ ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ  ಪಂಚ ಗ್ಯಾರಂಟಿ ಯೋಜನೆಗಳು  ರಾಜ್ಯದ  ಮಹಿಳಾ ನಾಗರಿಕರಿಗೆ  ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳು ಆರ್ಥಿಕ ಸಬಲೀಕರಣಯೊಂದಿಗೆ ಸ್ತ್ರೀ  ಸ್ವಾತಂತ್ರ್ಯ ದೊರಕುವಂತಾಗಲು ಮಹತ್ವದ ಪ್ರಮುಖ ಪಾತ್ರ ವಹಿಸಿರುತ್ತದೆ.  ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಉತ್ತಮವಾಗಿ ಗದಗ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ . ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನು ಒದಗಿಸುವಲ್ಲಿ ಗದಗ ಜಿಲ್ಲೆಯ ಪಾತ್ರ ಮಹತ್ವದಾಯಕವಾಗಿದ್ದು ಈ ಒಂದು ಸಾಧನೆಯು ಪ್ರಶಂಸನೀಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಸನ್ಮಾನ್ಯ ಎಸ್‌. ಆರ್‌. ಪಾಟೀಲ್ ಅವರು ಪ್ರಗತಿ ಪರೀಶೀಲನಾ ಸಭೆ ನಡೆಸಿ  ಎಂದು ನುಡಿದರು. ಅರ್ಹರಿಗೆ ಸರಕಾರದ ಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ನಗರದ ಉಪ ವಿಭಾಗಾಧಿಕಾರಿಗಳ ಆವರಣದಲ್ಲಿರುವ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು . ಗದಗ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿದೆ.  

ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ. ಬಿ. ಅಸೂಟಿ ತಾಲೂಕಾ ಅಧ್ಯಕ್ಷರಾದ ಅಶೋಕ ಮಂದಾಲಿ . ಜಿಲ್ಲಾ ಉಪಾಧ್ಯಕ್ಷರಾದ ನೀಲವ್ವಬೋಳನವರ .ಸದಸ್ಯರಾದ ಈಶಣ್ಣ ಹುಣಸೀಕಟ್ಟಿ. ಕೃಷ್ಣಗೌಡ.ಎಚ್‌.ಪಾಟೀಲ್ . ಸಂಗಮೇಶ ಹಾದಿಮನಿ . ಸಾವಿತ್ರಿ ಹೂಗಾರ. ರಮೇಶ್ ಹೊನ್ನಿನಾಯ್ಕರ. ನಿಂಗಪ್ಪ ದೇಸಾಯಿ. ದೇವರಡ್ಡಿ ತಿರ್ಲಾಪೂರ ಸೇರಿದಂತೆ ಇತರೆ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.