ಆಹಾರ ಇಲಾಖೆ ದಾಳಿ : ಅಕ್ರಮವಾಗಿ ಬಳಸುತ್ತಿದ್ದ ಸಿಲಿಂಡರ್‌ಗಳ ಜಪ್ತಿ

Food Department raid: Illegally used cylinders seized

ವಿಜಯಪುರ ಮೇ.24: ಅಕ್ರಮವಾಗಿ ಗೃಹಬಳಕೆಯ ಸಿಲಿಂಡರ್‌ಗಳಿಂದ ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳಿಗೆ ರಿಫೀಲ್ ಮಾಡುತ್ತಿರುವ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.  

ಶನಿವಾರ ವಿಜಯಪುರ ನಗರದ ಬಾಟರ ಓಣಿಯ ಹತ್ತಿರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರಗಳಿಂದ ವಾಣಿಜ್ಯ ಉದ್ದೇಶದ ಸಿಲಿಂಡರಗಳಿಗೆ ರೀಪಿಲ್ ಮಾಡುತ್ತಿರುವ ಸ್ಥಳದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿ 20 ತುಂಬಿದ ಅಡುಗೆ ಅನಿಲ ಸಿಲಿಂಡರಗಳನ್ನು ,6 ವಾಣಿಜ್ಯ ಉದ್ದೇಶದ ಖಾಲಿ ಸಿಲಿಂಡರಗಳನ್ನು ಹಾಗೂ ರಿಪಿಲ್ ಮಾಡಲು ಬಳಸುತ್ತಿದ್ದ ಮೋಟಾರು ಮತ್ತು ತೂಕದ ಯಂತ್ರವನ್ನು ವಶಪಡಿಸಿಕೊಂಡು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಆಹಾರ ನೀರೀಕ್ಷಕರಾದ ವಿಜಕುಮಾರ ಗುಮಶೆಟ್ಟಿ ಅವರ ನೇತೃತ್ವದ ದಾಳಿಯಲ್ಲಿ ಆದರ್ಶ ನಗರ ಪಿಎಸ್‌ಐ ರೇಣುಕಾ ದಿನ್ನಿ, ಆಹಾರ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.