ಉಚಿತ ಆರೋಗ್ಯ ತಪಾಸಣೆ

Free health checkup- Mahalingpur news

ಮಹಾಲಿಂಗಪುರ 28: ನಗರದಲ್ಲಿ ಅನೇಕ ಕಡೆ ಬಡ ಜನರಿಗೆ ಅನುಕೂಲ ಆಗುವುದರ ಸಲುವಾಗಿ ರಾ​‍್ಕರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎನ್ ಸಿ ಡಿ (non-communicable diseases.)  ವತಿಯಿಂದ ಉಚಿತ ಆರೋಗ್ಯ ತಪಾಸಣೆ ತಿಂಗಳಲ್ಲಿ ನಾಲ್ಕು ಬಾರಿ ಜರುಗುತ್ತಿದೆ. 

ಸಾಂಕ್ರಾಮಿಕವಲ್ಲದ ರೋಗಗಳು. ಇವುಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡದ ರೋಗಗಳಾಗಿವೆ, ಆದರೆ ಜೀವನ ಶೈಲಿ, ಪರಿಸರ, ತಳಿಶಾಸ್ತ್ರ, ಮತ್ತು ಶರೀರ ಶಾಸ್ತ್ರದಂತಹ ಅಂಶಗಳಿಂದಾಗಿ ಕಾಲಾನಂತರದಲ್ಲಿ ಬೆಳವಣಿಗೆಯಾಗುತ್ತವೆ. ಸಾಮಾನ್ಯ ಉದಾಹರಣೆಗಳಲ್ಲಿ ಹೃದಯರೋಗ, ಕ್ಯಾನ್ಸರ್ ,ಮಧುಮೇಹ ,ಮತ್ತು ಉಸಿರಾಟದ ಕಾಯಿಲೆಗಳು ಸೇರುವೆ.ಅವುಗಳನ್ನು ನಿಯಂತ್ರಣ ಸಲುವಾಗಿ ಈ ಕರ‌್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಸಾಧು ನಿರಂಜನ ದೇವಸ್ಥಾನ ಆವರಣದಲ್ಲಿ ಜರುಗಿದ ಉಚಿತ ಶಿಬಿರ ಉದ್ದೇಶಿಸಿ ಆಪ್ತ ಸಮಾಲೋಚಕರಾದ ಶ್ರೀದೇವಿ ಅಡವಿ ಮಾತನಾಡಿದ ಅವರು, ‘ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ.ಆದರೆ ಅರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಸುರಿಯುತ್ತೇವೆ.ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ.ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದರು. 

ಈ ಸಂರ‌್ಭದಲ್ಲಿ ಸ್ಥಳೀಯರಾದ ಗೀತಾ ಪಾಟೀಲ, ಶಿವಲೀಲಾ ಜಕಾತಿಮಠ, ಮಂಜುಳಾ ನಾಶಿ, ಅನ್ನಪರ‌್ಣ ಚಿಚಖಂಡಿ, ಜಯಶ್ರೀ ಸಲೋನಿ, ರು​‍್ಜನ ಪವಾರ, ಸಿಬ್ಬಂದಿಗಳಾದ ಶೋಭಾ ಬಾಗಲಕೋಟ,ಶರತ ಪಾಟೀಲ, ಇನ್ನು ಹಲವರು ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದರು.