ಗದಗ: ಸ್ವಯಂ ಪ್ರೇರಿತರಾಗಿ ಸ್ವಚ್ಚತೆಗಾಗಿ ವಿನಿಯೋಗಿಸೋಣ: ಡಾ. ವಿರುಪಾಕ್ಷರಡ್ಡಿ

ಲೋಕದರ್ಶನ ವರದಿ ಗದಗ 03: ದಿ.02ರಂದು ಸ್ವಚ್ವತಾ ಪಾಕ್ಷೀಕ -2019 ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಡಾ. ವಿರುಪಾಕ್ಷರಡ್ಡಿ ಎಸ್. ಮಾದಿನೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ಇವರು ಅಧ್ಯಕ್ಷತೆ ವಹಿಸಿದ್ದರು. ಮತ್ತು ಅಧ್ಯಕತೆಯ ಭಾಷಣದಲ್ಲಿ " ಸ್ವಚ್ಚ ಮತ್ತು ಅಭಿವೃದ್ಧಿ ಹೊಂದಿರುವ ಭಾರತ ನಿಮರ್ಾಣ ಮಾಡುವುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಆದ್ದರಿಂದ ಮಹಾತ್ಮಾ ಗಾಂಧೀಜಿಯವರ ಕನಸನ್ನು ಈಡೇರಿಸುವದು ನಮ್ಮೆಲ್ಲರ ಕರ್ತವ್ಯ, ಈ ದಿಸೆಯಲ್ಲಿ ಇಲಾಖೆಯ ಎಲ್ಲ ತಾಲೂಕಾ ಆಸ್ಪತ್ರೆ / ಎಲ್ಲ ಸಮುದಾಯ ಆರೋಗ್ಯ ಕೇಂದ್ರ / ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 02ರಿಂದ 15ರವರೆಗೆ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸೋಣ ಹಾಗೂ ಪ್ರತಿವಾರ 2 ಘಂಟೆಗಳನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಚತೆಗಾಗಿ ವಿನಿಯೋಗಿಸೋಣ ಎಂದು ತಿಳಿಸಿದರು ಹಾಗೂ ಸ್ವಚತಾ ಪ್ರತಿಜ್ಞೆಯನ್ನು ಭೋದಿಸಿದರು. ಡಾ.ವಾಯ್.ಕೆ. ಭಜಂತ್ರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸದರಿ ಸ್ವಚ್ಚಾತಾ ಪಾಕ್ಷಿಕ-2019 "ಆಯುಷ್ಮಾನ್ ಭಾರತ- ಆರೋಗ್ಯ ಕನರ್ಾಟಕ ಸ್ವಚ್ಚತಾ ಡ್ರೈವ್ಅನ್ನು 02 ಏಪ್ರೀಲ್ -2019 ರಿಂದ 15 ಏಪ್ರೀಲ್ -2019 ರವರೆಗೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು, ಸದರಿಕಾರ್ಯಕ್ರಮದಲ್ಲಿ ಹೆಚ್.ಸುರೇಶ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಗದಗ, ಹೆಚ್.ಬಿ.ಗದಿಗೆಣ್ಣವರ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಪ್ರಿನ್ಸ್ ಜೆಮ್ಸ್ ಶರದ್ ಜಿಲ್ಲಾ ಸಲಹೆಗಾರರು, ಕ್ವಾಲಿಟಿ ಅಶ್ಯೂರನ್ಸ್, ಜಗದೀಶ.ವಿ.ಧನ್ಮೂರ ಕಾರ್ಯಕ್ರಮ ಮತ್ತು ಆಡಳಿತ ಸಹಾಯಕ, ಕ್ವಾಲಿಟಿ ಆಶ್ಯೂರನ್ಸ್ ಹಾಗೂ ಕಛೇರಿಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.