ಗದಗ 11: ಆರೋಗ್ಯಕರ ಮತ್ತು ಕ್ರಿಯಾಶೀಲತೆಗಾಗಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಗಳು ಪ್ರತಿಯೊಬ್ಬರ ಜೀವನದ ಮಂತ್ರವಾಗಬೇಕು ಎಂದು ರಾಜ್ಯದ ಕೌಶಲ್ಯಾಭಿವೃದ್ಧಿ, ಮುಜರಾಯಿ ಇಲಾಖೆಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅಭಿಪ್ರಾಯಪಟ್ಟರು.
ಗದುಗಿನ ಬಿಂಕದಕಟ್ಟಿ ಗ್ರಾಮದ ಹೊರವಲಯದ ಜಮೀನು ಒಂದರಲ್ಲಿ ಸಸಿ ನೆಡುವ ಮೂಲಕ ಜಿಲ್ಲಾ ಮಟ್ಟದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಕರ್ಾರ ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಕೃಷಿ ಕಾಮರ್ಿಕರಿಗೆ ಉದ್ಯೋಗ ಹೀಗೆ ಎಲ್ಲ ಸೌಲಭ್ಯವನ್ನು ನೀಡುತ್ತಿದೆ. ಅದನ್ನು ಬಳಸುವವರು ಎಲ್ಲವೂ ಗ್ರಾ .ಪಂ. ನಗರಸಭೆ ಅಥವಾ ಸಕರ್ಾರ ಮಾಡಲಿ ಎನ್ನುವ ಮನೋಭಾವ ಬದಿಗಿಟ್ಟು ಸ್ವಚ್ಛತೆಗೆ , ನೀರಿನ ಸದ್ಭಳಕೆಗೆ ಗಮನ ನೀಡುವುದರಿಂದ ಇಡೀ ಓಣಿ, ಗ್ರಾಮ, ನಗರ ಪ್ರದೇಶಗಳನ್ನು ಸ್ವಚ್ಛ ಸುಂದರವಾಗಿ ಇಡಲು ಖಂಡಿತ ಸಾಧ್ಯವಿದೆ. ಜನ ಸಕ್ರಿಯವಾಗಿ ತಮ್ಮದು ಎನ್ನುವ ಭಾವದಿಂದ ಕಾರ್ಯ ನಿರ್ವಹಿಸಿದಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಇದರೊಂದಿಗೆ ಪರಿಸರ ಸಂರಕ್ಷಣೆ , ಮರ ಬೆಳೆಸುವುದು, ನೀರಿನ ಸಂರಕ್ಷಣೆ, ಸಂವರ್ಧನೆ ಕಾರ್ಯಗಳನ್ನು ರೈತರ ಹೊಲಗಳಲ್ಲಿ, ಸಮುದಾಯದ ಭೂಮಿಗಳಲ್ಲಿ ಆಸಕ್ತಿಯಿಂದ ಮಾಡಲು ಎಲ್ಲರೂ ಮುಂದಾಗಬೇಕು. ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಗದಗ ಜಿಲ್ಲೆಗೆ ನದಿ ಮೂಲಗಳಿಂದ ಶುದ್ಧ ನೀರು ಪೂರೈಕೆ ಆಗುತ್ತಿದ್ದು ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಬಂದಲ್ಲಿ ಉದ್ಯೋಗ ಅಷ್ಟೇ ಅಲ್ಲ ರೈತರಿಗೆ ಆಸ್ತಿಯಾಗುವ ಕಾರ್ಯಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೆತ್ತಕೊಂಡಿರುವುದು ಸ್ತುತ್ಯಾರ್ಹವಾಗಿದೆ ಎಂದು ಸಚಿವ ಪರಮೇಶ್ವರ ನಾಯ್ಕ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಅವರ ಮಾತನಾಡಿ ಜಲ ಸಂವರ್ಧನೆಗಾಗಿ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ ರಿಜ್ ವ್ಯಾಲಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಅನೂಕುಲವಾಗಿದೆ ಎಂದರು. ರಾಜ್ಯ ಸರಕಾರವು ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವವು ಅತ್ಯಂತ ಪ್ರಮುಖವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಭಾಗದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೆ ಬರುವದಿದ್ದು ಈ ಭಾಗದ ರೈತರು ಸಂಬಂಧಿಸಿದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯೋಜನೆಗೆ ತಕ್ಕಂತೆ ತಮ್ಮ ಹೊಲಗಳನ್ನು ಹದ ಮಾಡಿಕೊಳ್ಳಲು ಶಾಸಕರು ಸೂಚಿಸಿದರು.
ಗದಗ ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ, ಮಾಜಿ ಶಾಸಕ ನಂಜಯ್ಯನಮಠ ಅವರುಗಳು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗದಗ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಕಳೆದ ಎರಡು ದಶಕಗಳಲ್ಲಿ ರಾಜ್ಯ 14 ವರ್ಷ ಬರ ಪರಿಸ್ಥಿತಿ ಎದುರಿಸಿದೆ. ಕಳೆದ 5 ವರ್ಷಗಳಲ್ಲಿ ಗದಗ ಜಿಲ್ಲಾ ಸೇರಿದಂತೆ 4 ವರ್ಷ ಬರ ಇದ್ದು ರೈತರ ಗ್ರಾಮೀಣ ವರ್ಗದ ಜನರ ಜೀವನ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ 2019 ನ್ನು ಜಲಾಮೃತ ವರ್ಷವೆಂದು ಘೋಷಿಸಿದ್ದು ನೀರು ನೆಲಗಳ ಸಂವರ್ಧನೆ, ರಕ್ಷಣೆ ಅವುಗಳ ಸದ್ಭಳಕೆಗೆ ಜನಜಾಗೃತಿ ಮೂಡಿಸಲು ಮುಂದಾಗಿದೆ. ಅದಕ್ಕಾಗಿ ಜಲ ಸಾಕ್ಷರತೆ, ಜಲಮೂಲಗಳ ಪುನಶ್ಚೇತನ, ಜಲಸಂವರ್ಧನೆ ಅದರ ಸದ್ಬಳಕೆ ಹಾಗೂ ಪರಿಸರ ಹಸುರೀಕರಣದ ನಾಲ್ಕು ಅಂಶಗಳ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದೇ ರೀತಿ ಸ್ವಚ್ಛ ಭಾರತ ಮಿಶನದ ಮುಂದುವರೆದ ಭಾಗವಾಗಿ ಈಗಾಗಲೇ ಕಟ್ಟಿಸಲಾದ ಶೌಚಾಲಯಗಳನ್ನು ಬಳಸುವ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮಗಳ ಮೂಲಕ ಜನಜಾಗೃತಿಗಾಗಿ ಮಾಹಿತಿ ರಥಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡಲಿವೆ. ರಾಜ್ಯಾದ್ಯಂತ 1000 ಹಾಗೂ ಜಿಲ್ಲೆಯಲ್ಲಿ 25 ಗ್ರಾ.ಪಂ. ಗಳನ್ನು ತ್ಯಾಜ್ಯ ನಿರ್ವಹಣೆ ಮಾದರಿ ಗ್ರಾ.ಪಂ. ಗಳನ್ನಾಗಿಸಲು ಗುರಿ ಹೊಂದಲಾಗಿದೆ ಎಂದು ಮಂಜುನಾಥ ಚವ್ಹಾಣ ನುಡಿದರು.
ಗದಗ ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶ ಸರ್ವರನ್ನು ಸ್ವಾಗತಿಸಿದರು. ಪಂಡಿತ ಪುಟ್ಟರಾಜ ಸಂಗೀತ ಶಾಲೆ ವಿದ್ಯಾಥರ್ಿಗಳು ನಾಡಗೀತೆ ಪ್ರಸ್ತುತಿಸಿದರು. ಇದೇ ಸಂದರ್ಭದಲ್ಲಿ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕುರಿತಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಗದಗ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ , ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ವಾಸಣ್ಣ ಕುರಡಗಿ , ಸಿದ್ಧು ಪಾಟೀಲ, ಗದಗ. ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಉಪಾಧ್ಯಕ್ಷೆ ಸುಜಾತಾ ಖಂಡು, ಬಿಂಕದಕಟ್ಟಿ ಗ್ರಾ.ಪಂ. ಅಧ್ಯಕ್ಷ ವಿ.ಡಿ. ರಂಗಪ್ಪನವರ, ಉಪಾಧ್ಯಕ್ಷೆ ಜಯಶ್ರೀ ಹುಲ್ಲೋಜಿ, ಗಣ್ಯರಾದ ರವಿ ಮೂಲಿಮನಿ, ಡಾ. ಮೇಟಿ ಡಬಾಲಿ, ತಾ.ಪಂ. ಹಾಗೂ ಗ್ರಾ.ಪಂ. ಸದಸ್ಯರು, ಸ್ತ್ರೀ ಶಕ್ತಿ ಸ್ವ ಸಹಾಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆ, ಕೃಷಿ ಕಾಮರ್ಿಕರಿಗೆ ಏರ್ಪಡಿಸಿದ ಆರೋಗ್ಯ ತಪಾಸಣೆ ಕಾರ್ಯಕ್ರಮ, ಕೃಷಿ, ಜಲಾನಯನ, ಪಶುಪಾಲನೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಮಾಹಿತಿ ಕೇಂದ್ರಗಳನ್ನು ಸಚಿವರು ವೀಕ್ಷಿಸಿದರು.