ಮೆಕ್ಡೊನಾಲ್ಡ್ಸ ಅಧ್ಯಕ್ಷ ಈಸ್ಟರ್ಬ್ರೂಕ್ಗೆ ಕಂಪನಿಯಿಂದ ಗೇಟ್ಪಾಸ್

 ನ್ಯೂಯಾರ್ಕ, ನ.4:   ಫಾಸ್ಟ್-ಫುಡ್ ದೈತ್ಯ ವೆ್ಡೋನಾಲ್ಡ್ಸ್ಸನ ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಈಸ್ಟರ್ ಬ್ರೂಕ್  ಅವರು ಕಂಪನಿಯ 'ಉದ್ಯೋಗಿಯೊಂದಿಗೆ ಒಮ್ಮತದ ಸಂಬಂಧ'ದ ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಂಪನಿಯಿಂದ ಹೊರಹಾಕಲಾಗಿದೆ ಎಂದು ಸಂಸ್ಥೆ ಭಾನುವಾರ ತಿಳಿಸಿದೆ. ವೆ್ಡೊನಾಲ್ಡ್ಸ್ಸ ಯುಎಸ್ಎ ಸಂಸ್ಥೆಯ ಅಧ್ಯಕ್ಷ ಕ್ರಿಸ್ ಕೆಂಪ್ಕಿನ್ಸ್ಕಿ ಅವರನ್ನು ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಿಸಲಾಗಿದೆ. ಮಾತ್ರವಲ್ಲ ಕ್ರಿಸ್ ಅವರನ್ನು ನಿರ್ದೇಶಕರ ಮಂಡಳಿಗೂ ಆಯ್ಕೆ ಮಾಡಲಾಗಿದೆ. ಕಂಪನಿಯ ನೀತಿಯನ್ನು ಉಲ್ಲಂಘಿಸಿದ ಮತ್ತು ಉದ್ಯೋಗಿಯೊಂದಿಗಿನ ಒಮ್ಮತದ ಸಂಬಂಧವನ್ನು ಹೊಂದಿದ ಹಿನ್ನೆಲೆಯಲ್ಲಿ ಕಂಪನಿಯ ಮಂಡಳಿಯು ಅವರನ್ನು ವಜಾಗೊಳಿಸುವ ನಿರ್ಣಯ ಅಂಗೀಕರಿಸಿತು. ಸ್ಟೀವ್ ಈಸ್ಟರ್ಬ್ರೂಕ್ ಅವರ ಸ್ಥಾನಕ್ಕೆ ಕೆಂಪ್ಕಿನ್ಸ್ಕಿ ಅವರನ್ನು ನೇಮಿಸಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.  ಈಸ್ಟರ್ ಬ್ರೂಕ್ ಅವರು, ಕಂಪನಿಗೆ ಕಳುಹಿಸಿದ ಈಮೇಲ್ನಲ್ಲಿ, ಈ ಸಂಬಂಧವನ್ನು ಒಪ್ಪಿಕೊಂಡಿದ್ದರು. ಮಾತ್ರವಲ್ಲ ಅದು ತಪ್ಪು ಎಂದು ಹೇಳಿದ್ದರು.  "ಕಂಪನಿಯ ಮೌಲ್ಯಗಳನ್ನು ಗಮನಿಸಿದರೆ, ನಾನು ಕಂಪನಿಯಿಂದ ಹೊರ ನಡೆಯುವ ಸಮಯ ಇದಾಗಿದೆ ಎಂದು ನಾನು ಒಪ್ಪುತ್ತೇನೆ" ಎಂದು ಈಸ್ಟರ್ಬ್ರೂಕ್ ಈಮೇಲ್ನಲ್ಲಿ ತಿಳಿಸಿದ್ದರು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ವೆ್ಡೋನಾಲ್ಡ್ಸ್ಸ ಯುಎಸ್ ನ ಹೊಸ ಅಧ್ಯಕ್ಷರಾಗಿ ಇಂಟರ್ ನ್ಯಾಷನಲ್ ಆಪರೇಟೆಡ್ ಮಾರ್ಕೆಟ್ಸ್ ಅಧ್ಯಕ್ಷ ಜೋ ಎಲರ್ಿಂಗರ್ ಅವರನ್ನು ನೇಮಿಸಲಾಗಿದೆ.  ಮೆಕ್ಡೊನಾಲ್ಡ್ಸ 100 ಕ್ಕೂ ಹೆಚ್ಚು ದೇಶಗಳಲ್ಲಿ 38,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಳಿಗೆಗಳನ್ನು ಹೊಂದಿರುವ ವಿಶ್ವದ ಪ್ರಮುಖ ಜಾಗತಿಕ ಆಹಾರ ಸೇವಾ ಚಿಲ್ಲರೆ ವ್ಯಾಪಾರಿ ಕಂಪನಿಯಾಗಿದೆ.