ಗ್ರೇಟರ್ ಬೆಂಗಳೂರು ಮಳೆಯ ಅವಾಂತರದ ನಡುವೆ ಗದಗ ನಲ್ಲಿ ಚರಂಡಿ ರಸ್ತೆಗಳ ಅತಿಕ್ರಮಣದ ಅನಧಿಕೃತ ಕಟ್ಟಡಗಳ ನಿರ್ಮಾಣ ನಗರಸಭೆ ಮೌನ : ರಾಘವೇಂದ್ರ ಪಾಲನಕರ

Greater Bangalore: Municipal Council silent on construction of unauthorized buildings encroaching on

ಗ್ರೇಟರ್ ಬೆಂಗಳೂರು ಮಳೆಯ ಅವಾಂತರದ ನಡುವೆ ಗದಗ ನಲ್ಲಿ ಚರಂಡಿ ರಸ್ತೆಗಳ ಅತಿಕ್ರಮಣದ ಅನಧಿಕೃತ ಕಟ್ಟಡಗಳ ನಿರ್ಮಾಣ ನಗರಸಭೆ ಮೌನ : ರಾಘವೇಂದ್ರ ಪಾಲನಕರ

ಗದಗ 19:  ಅವಳಿ ನಗರವಾದ ಗದಗ - ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪಂಚರ ಹೊಂಡ ಹತ್ತಿರದ ಪಟೇಲ್ ರಸ್ತೆಯ ಬಿ ಎಸ್ ಏನ್ ಎಲ್ ಕಚೇರಿಯ ಎದುರಿಗೆ (ಮಹದೇವ್ ಮೆಡಿಕಲ್ ಎದುರಿಗೆ )  ಬಿ ಎಸ್ ಏನ್ ಎಲ್ ಕಚೇರಿಯಿಂದ ಬನ್ನೀ ಕಟ್ಟೆ ಭೀಷ್ಮ ಕೆರೆಗೆ ಸಂಪರ್ಕ ಕಲ್ಪಿಸಿಕೊಡುವ ಪ್ರಮುಖ ರಸ್ತೆಯನ್ನು ಹೊಂದಿಕೊಂಡಿರುವ ಕಾರ್ನರ ನಲ್ಲಿ ನಗರಸಭೆಯ ರಸ್ತೆ ಹಾಗೂ ಗಟಾರ ಚರಂಡಿಯ ಮೇಲೆಯೇ ಅನಧಿಕೃತ ಹಾಗೂ ಅತಿಕ್ರಮಣದೊಂದಿಗೆ ಬ್ರಹತ್ ಕಟ್ಟಡ ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿರುತ್ತದೆ. ಈ ಭಾಗದಲ್ಲಿ ಮಳೆ ಬಂದರೆ ಸಾಕು ಒಂದನೇ ನಂಬರ್ ಶಾಲೆ ಹಾಗೂ ಪಂಚರ ಹೊಂಡದ ರಸ್ತೆಯ ತುಂಬೆಲ್ಲಾ ಚರಂಡಿ ನೀರು ಮಣಕಾಲು ವರೆಗೂ ಜಮೆಯಾಗುತ್ತದೆ.  

ಇದರಿಂದಾಗಿ ನಿರಂತರ ಸುರಿದ ಮಳೆಯಿಂದ ಚರಂಡಿಗೆ ಹೊಂದಿಕೊಂಡು ಅನಧಿಕೃತ ಅತಿಕ್ರಮಣ ಕಟ್ಟಡ ನಿರ್ಮಾಣ ಮಾಡಿದ್ದರಿಂದ ಗಟಾರಗಳು ಮುಚ್ಚಿ ಹೋಗಿದ್ದು ಮಳೆಯ ನೀರು ಸುಗಮವಾಗಿ ಹರಿಯಲು ಸಾಧ್ಯವಾಗದೆ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು . ಜೋರು ಮಳೆಯಿಂದ ಹಲವೆಡೆ ರಸ್ತೆಗಳಲ್ಲಿ ಅಡಿಗಟ್ಟಲೆ ನೀರು ನಿಂತ ಪರಿಣಾಮ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಮಳೆ ನೀರು ಹರಿದು ಹೋಗಲು ಸಮರ​‍್ಕ ಚರಂಡಿ ಕೊರತೆಯಿಂದ ಜನ ಪರದಾಡುವಂತಾಗಿರುತ್ತದೆ. ಇಂತಹದರಲ್ಲಿ ಪಂಚರ ಹೊಂಡದ ಬಿ ಎಸ್ ಏನ್ ಎಲ್ ಆಫೀಸ್ ಎದುರಿಗೆ ಬ್ರಹತ್ ವಾಣಿಜ್ಯ ಕಟ್ಟಡವು ರಸ್ತೆ ಹಾಗೂ ಚರಂಡಿಯ ಮೇಲೆಯೇ ನಿರ್ಮಾಣವಾಗುತ್ತಿದೆ. ಇದನ್ನು ಜಿಲ್ಲಾ ಆಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಹಾಗೂ ನಗರಸಭೆಯ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಆಗಿರುವರು.ಇದರಿಂದ  ಹಲವಾರು ರೀತಿಯಲ್ಲಿ ಅತಿಕ್ರಮಣ ಕೈಗೊಂಡು ವಿಶಾಲವಾದ, ಮತ್ತು ಸುರಳಿತ ಸುಗಮ ಸಂಚಾರಕ್ಕೆ ನೆರವುದಾಯಕವಾಗಬೇಕಾದ ರಸ್ತೆಗಳು ಅತಿಕ್ರಮಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿಯಿಂದಾಗಿ ವಿಶಾಲವಾದ ರಸ್ತೆಗಳು ಇಂದು ಇಕ್ಕಲು ರಸ್ತೆಗಳಾಗಿ ಮಾರು​‍್ಡತ್ತಿವೆ. ಮತ್ತು ಚರಂಡಿಗಳೆಲ್ಲವೂ ಮುಚ್ಚಿಹೋಗಿ ಚರಂಡಿಯ ನೀರೇಲ್ಲಾ ರಸ್ತೆಯಲ್ಲಿಯೇ ಹರಿಯುತ್ತದೆ. ಇದರಿಂದ ಈ ಭಾಗದಲ್ಲಿ ಓಡಾಡುವ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ ಸವಾರರು, ಮತ್ತು ಸ್ಥಳೀಯ ನಾಗರಿಕರಿಗೂ ತುಂಬಾ ತೊಂದರೆಗಳು ಉಂಟಾಗುತ್ತದೆ. ಹಲವಾರು ಚರಂಡಿಯಲ್ಲಿ ಬಿದ್ದು ಗಾಯಗೊಂಡಿರುವರು.     

ಇಂತಹದರಲ್ಲಿಯೇ ಅವಳಿ ನಗರದ ಗದಗ -ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಸದರ ಈ ಒಂದು ನಿವೇಶನದಲ್ಲಿ ಅನಧಿಕೃತವಾಗಿ, ಅತಿಕ್ರಮಣದೊಂದಿಗೆ ನಿರ್ಮಾಣವಾಗುತ್ತಿರುವ ಬ್ರಹತ್ ಬಹು ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಯು  ಪ್ರಗತಿಯಲ್ಲಿ ಇರುತ್ತದೆ.  ಆದರೆ ಈ ಒಂದು ಕಟ್ಟಡ ನಿರ್ಮಾಣ ಕಾಮಗಾರಿಗೆ ಗದಗ ಬೆಟಗೇರಿ ನಗರಸಭೆಯಿಂದ  ಜಿಲ್ಲಾ ಆಡಳಿತದಿಂದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯೆಮ ಇಲಾಖೆ, ಪುರಾತತ್ವ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಇವರಿಂದ ಅಧಿಕೃತ ಕಟ್ಟಡ ನಿರ್ಮಾಣ ಮಾಡಲಾಗುವ ಕುರಿತು ಪರವಾನಗಿ ದೊರಕಿದೆಯೇ?  ಹೇಗೆ ಎಂಬುದೇ ಎಕ್ಷ ಪ್ರಶ್ನೆಯಾಗಿರುತ್ತದೆ. 

ಈ ಒಂದು ಅವೈಜ್ಞಾನಿಕ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಯಾವ ಮಾನದಂಡದ ಅಡಿಯಲ್ಲಿ ಈ ಒಂದು ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ಪರವಾನಗಿ ದೊರಕಿದೆಯೇ ಹೇಗೆ ಅದು ಸಾರ್ವಜನಿಕ ಗಟಾರ ಮೇಲೆಯೇ ನಿರ್ಮಾಣ ಮಾಡಲು ನಿಖರವಾಗಿ ಆದೇಶಿಸಲಾಗಿದೆಯೇ ಹಾಗೂ ಈ ಕಾಮಗಾರಿಯ ರೂಪರೇಷಗಳ ಕುರಿತು ನೀಡಲಾದ ಪರವಾನಗಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಗದಗ ಬೆಟಗೇರಿ ನಗರಸಭೆ, ನಗರಾಭಿವೃದ್ಧಿ ಇಲಾಖೆ ಲೋಕೋಪಯೋಗಿ ಇಲಾಖೆ, ಪ್ರವಾಸೋಧ್ಯೇಮ ಮತ್ತು ಪುರಾತತ್ವ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿಯಮಗಳ ಅಡಿಯಲ್ಲಿ  

ಪ್ರಾಚೀನ ದೇವಾಲಯಗಳಿಂದ 300 ಮೀಟರ್ ಅಂತರದಲ್ಲಿ ಯಾವುದೇ ಬ್ರಹತ್ ಕಟ್ಟಡ  ಕಟ್ಟಬಾರದು ಅಂತ ಸರಕಾರದ ಆದೇಶ ಇದ್ದರೂ ಈ ಕಟ್ಟಡವನ್ನು ಕಟ್ಟುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ ಅದರಂತೆ  

ಇನ್ನಿತರೇ ಇಲಾಖೆಗಳ ಅಧಿಕೃತ ಪರವಾನಗಿ ಸಹಿತವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆಯೇ? ಎಂಬುದನ್ನು ಮರು ಪರೀಶೀಲನೆ ಮಾಡಿ, ಸದರ ಅತೀಕ್ರಮಣದ ತೆರವಿನ ನಂತರವೇ ಸದರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುವು ಮಾಡಿಕೊಡಬೇಕು ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.. 

ಬಾಕ್ಸ್‌  

        ಇದೇ ದಿನಾಂಕ 18 ರಂದು ಗ್ರೇಟರ್ ಬೆಂಗಳೂರಿನಲ್ಲಿ ಸುರಿದ  ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿಯೇ ಜಾಲಾವೃತಗೊಂಡಿರುತ್ತದೆ. ಇದಕ್ಕೆ ಕಾರಣ ಕೆರೆ ಕಾಲುವೆಗಳ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿರುವದೇ ಆಗಿರುತ್ತದೆ. ಅದರಂತೆ ಗದಗ ನಗರದಲ್ಲಿಯು ಪ್ರಮುಖ ಬಡಾವಣೆಯಾದ ಪಂಚರ ಹೊಂಡ ಹತ್ತಿರ ಬಿ ಎಸ್ ಏನ್ ಎಲ್ ಕಚೇರಿ ಎದುರಿನಲ್ಲಿ ಅನಧಿಕೃತವಾಗಿ ಚರಂಡಿ ಹಾಗೂ ರಸ್ತೆಗೆ ಹೊಂದುಕೊಂಡೆ ನಿರ್ಮಾಣವಾಗುತ್ತಿರುವ ಬ್ರಹತ್ ಬಹುಮಹಡಿ ಕಟ್ಟಡದಿಂದಾಗಿ ಚರಂಡಿ ಬ್ಲಾಕ್ ಆಗಿ ಹೊಲಸು ನೀರೆಲ್ಲಾ ರಸ್ತೆಗೆ ಹರಿಯುತ್ತಿದೆ. ಈ ಕುರಿತು ಸನ್ಮಾನ್ಯ ಪೌರಾಯುಕ್ತರು ಗದಗ ಬೆಟಗೇರಿ ನಗರಸಭೆಗೆ ಅರ್ಜಿಯನ್ನು ಕೂಡಾ ಇದೇ ದಿ. 8 ರಂದು ನೀಡಲಾಗಿರುತ್ತದೆ. ಮುಂಗಾರು ಮಳೆ ಪ್ರಾರಂಭಕ್ಕೂ ಮೊದಲೇ  ಮುಂದೆ ಸಂಭವಿಸಬಹುದಾದ ಮಳೆ ಅವಾಂತರವನ್ನು ತಡೆಯಲು ನಗರಸಭೆ, ಹಾಗೂ ಜಿಲ್ಲಾಡಳಿತ ಕಾರ್ಯಪ್ರವೃತರಾಗಬೇಕಾಗಿರುತ್ತದೆ.