ಉತ್ತರ ಕನ್ನಡ ಜಿಲ್ಲೆಯಲ್ಲಿ ರಭಸರಮಳೆ:ಅಲ್ಲಿಲ್ಲಿ ರಸ್ತೆ ಜಲಾವೃತ ಕುಮಟಾ ಶಿರಸಿ ಮಧ್ಯೆ ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ
ಕಾರವಾರ 21: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ,ಕುಮಟಾ, ಭಟ್ಕಳ ಸೇರಿದಂತೆ ಎಲ್ಲೆಡೆ ಎಡೆಬಿಡದ ಮಳೆ ಬುಧುವಾರ ಬೆಳಗಿನಿಂದ ಸುರಿಯುತ್ತಿದೆ. ಕುಮಟಾದಲ್ಲಿ ಅತ್ಯಧಿಕ ಮಳೆಯಾಗುತ್ತಿದೆ. ಕುಮಟಾ ಶಿರಸಿ ರಾಜ್ಯ ಹೆದ್ದಾರಿ ದೇವಿಮನೆ ಘಟ್ಟದಲ್ಲಿ ಧರೆ ಕುಸಿತ ಆಗಿತ್ತು. ತೊರ್ಕೆಯ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಸರಾಗ ಹರಿಯಲು ಪಂಚಾಯತ್ ಕ್ರಮ ತೆಗೆದುಕೊಂಡಿತು. ಕೆಲ ಸಮಯ ಉಂಟಾದ ಆತಂಕ ನಂತರ ಮರೆಯಾಯಿತು. ಶಿರಸಿ ಸಿದ್ದಾಪುರ ಮಧ್ಯೆ ಸಹ ಸಂಚಾರಕ್ಕೆ ಕೆಲ ಸಮಯ ಅಡ್ಡಿಯುಂಟಾಯಿತು. ದಾಂಡೇಲಿ , ಹಳಿಯಾಳ ದಲ್ಲಿ ಸಹ ಮಳೆಯಾಗಿದೆ. ಮುಂಡಗೋಡ ,ಭಟ್ಕಳ, ಶಿರಸಿ ಯಲ್ಲಾಪುರದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಂದೂ ಸಹ ಸೂರ್ಯನ ದರ್ಶನ ಇಲ್ಲ ಉತ್ತರ ಕನ್ನಡದ ಬಹುತೇಕ ತಾಲೂಕುಗಳಲ್ಲಿ ಎಡೆ ಬಿಡದೆ ರಭಸದ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಆರಂಭವಾದ ಮಳೆ ಸಂಜೆ ಆರು ಗಂಟೆಯಾದರೂ ಬಿಟ್ಟಿಲ್ಲ. ಕೆಲವೊಮ್ಮೆ ರಭಸದ ಮಳೆ ಕಾರವಾರ, ಕುಮಟಾ,ಸಿದ್ದಾಪುರ , ದಾಂಡೇಲಿಯಲ್ಲಿ ಸಾಧರಣ ಸುರಿದಿದೆ.ಮಂಗಳವಾರ ಬೆಳಗಿನಿಂದ ಸಂಜೆತನಕ ಜಿಲ್ಲೆಯಲ್ಲಿ ಮಳೆ ಬೀಳುತ್ತಲೇ ಇದೆ. ಮಾರ್ಚನಿಂದ ಬಿಸಿಲ ಧಗೆ ಉಂಡಿದ್ದ ಭೂಮಿಗೆ ಮಳೆ ತಂಪೆರಚಿದೆ.
ಸೂರ್ಯನ ದರ್ಶನ ಸಹ ಕಾಣದಂತೆ ಆಕಾಶದಲ್ಲಿ ಮೋಡಗಳು ಆವರಿಸಿವೆ. ಪೂರ್ವ ಮುಂಗಾರು ಇದಾಗಿದ್ದು, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ ಪರಿಣಾಮ. ಎಡಬಿಡದೆ ಮಳೆ ಸುರಿಯುತ್ತಿದೆ. ಮುಂದಿನ ಮೂರು ದಿನಗಳ ಕಾಲ ಮಳೆ ಸುರಿಯಲಿದೆ. ನಿನ್ನೆ ಜಿಲ್ಲಾಧಿಕಾರಿ ಕಚೇರಿ ನೀಡಿದ ಸೂಚನೆ ನಿಜವಾಗಿದೆ. ಜನ ಮಳೆಯಲ್ಲಿ ದಿನ ನಿತ್ಯದ ವಹಿವಾಟು ಪ್ರಾರಂಭಿಸಿದರು.ಮಳೆಗೆ ಜನ ನಿಧಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.ಮಂಗಳವಾರ ತುಂಬಾ ಪ್ರಮಾಣದ ಮಳೆಯಾಗಿತ್ತು. ಮಂಗಳವಾರ ಬೆಳಗಿನತನಕ ಕಳೆದ 24 ತಾಸುಗಳಲ್ಲಿ ಬಿದ್ದ ಮಳೆಯ ವಿವರ ಇಂತಿದೆ ಅಂಕೋಲಾದಲ್ಲಿ 27 ಮಿಲಿ ಮೀಟರ್ , ಭಟ್ಕಳದಲ್ಲಿ 48.6 ಹಳಿಯಾಳ 28.4 , ಹೊನ್ನಾವರ 19.9 ,ಕಾರವಾರ 17.1, ಕುಮಟಾ 15, ಮುಮಡಗೋಡ 56.9, ಸಿದ್ದಾಪುರ 26.4 , ಶಿರಸಿ 56.9, ಸುಫಾ 16.3 , ಯಲ್ಲಾಪುರ 54.3, ದಾಂಡೇಲಿಯಲ್ಲಿ 29.6 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮಳೆ ದಾಖಲೆ ವಿಭಾಗ ತಿಳಿಸಿದೆ.