ಲೋಕದರ್ಶನ ವರದಿ
ಬಸವೇಶ್ವರ ದೇವಸ್ಥಾನದ ದೀಪ ಸ್ತಂಭ ಉದ್ಘಾಟನೆ
ಮಾಂಜರಿ, 29 : ಧರ್ಮ ಅನ್ನುವುದು ಎಲ್ಲರಿಗೂ ಸರಿಸಮಾನ ವಾಗಿರುತ್ತದೆ. ಆ ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ನಿಡಸೋಶಿಯ ಸಿದ್ಧ ಸಂಸ್ಥಾನ ಮಠದ ಪರಮಪೂಜ್ಯ ಡಾ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.
ಅವರು ಸೋಮವಾರರಂದು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾದ ದೀಪ ಸ್ತಂಭವನ್ನು ಉದ್ಘಾಟಿಸಿ ಅಯೋಜಿಸಲಾದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಸಹಕಾರ ಮನೋಭಾವ ಎಂಬುದು ಮುಖ್ಯವಾಗಿ ಬರಬೇಕಾಗಿದೆ. ಎಲ್ಲರ ಜೊತೆಗೂಡಿ ಬದುಕಿನ ಬಂಡಿ ಎಳೆಯುವಂತಹ ಕಾರ್ಯ ಮಾಡಬೇಕು. ಬದುಕಿನಲ್ಲಿ ಟೀಕೆ ನಿಂದನೆಗಳು ಬರುವುದು ಸಹಜ. ಮರ-ಗಿಡಗಳು ತನಗಾಗಿ ಬದುಕದೇ ಎಲ್ಲರಿಗಾಗಿ ಹೇಗೆ ಬದುಕು ಸಾಗಿಸುತ್ತವೆಯೋ ಹಾಗೆ ಆಸೆ ಆಮಿಷಗಳನ್ನು ದೂರ ಮಾಡಿ ಬಾಳುವ ಕಾರ್ಯ ಎಲ್ಲರೂ ಮಾಬೇಕಿದೆ.ನಿಸ್ವಾರ್ಥ ಭಾವನೆ ಎಂಬುದು ಮನುಷ್ಯನಲ್ಲಿರುವ ಕಲ್ಮಷವನ್ನು ತೊಳೆದು ಹಾಕುತ್ತದೆ. ಸ್ವಾರ್ಥ ಭಾವನೆ ಎಂಬುದು ಅವರನ್ನೇ ಸುಟ್ಟು ಹಾಕುತ್ತದೆ. ಅಂತಹ ಸ್ವಾರ್ಥ ಭಾವನೆ ಬಿಟ್ಟು ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ. ಪರಮಪೂಜ್ಯ ಡಾ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳು ಎಂದರು.
ಈ ವೇಳೆ ಹೊಸದಾಗಿ ನಿರ್ಮಿಸಿರುವ ದೀಪ ಸ್ತಂಭವನ್ನು ಶ್ರೀಗಳ ಹತ್ತದಿಂದ ಉದ್ಘಾಟಿಸಲಾಯಿತು ಈ ಕಾರ್ಯಕ್ರಮಕ್ಕೆ ನಂದಿಕುರಳಿಯ ಶ್ರೀ ವೀರಭದ್ರ ಸ್ವಾಮಿಜಿಗಳು ಶ್ರೀಶೈಲ ಹಿರೇಮಠರಾಮು ಚೌಗುಲೆ ಕಾಶಿನಾಥ್ ಹಿರೇಮಠ್ ಲಕ್ಷ್ಮಿ ಸೌಹಾರ್ದ ಸಂಸ್ಥೆಯ ಅಧ್ಯಕ್ಷರಾದ ಸತೀಶ್ ಮಗ್ಗನ್ನವರ್ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು ಇದೇ ವೇಳೆ ಪಂಚಮ ಶಿವಲಿಂಗೇಶ್ವರ ಇವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವತಿಯಿಂದ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ ಪ್ರಯತ್ನ ಅವರನ್ನು ಗ್ರಾಮಸ್ಥರ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು ಅದೇ ಪ್ರಕಾರ ದೀಪ ಸ್ತಂಭ ನಿರ್ಮಿಸಿದ ಶೆಟ್ಟಪ್ಪ ಗಾಡಿ ವಡ್ಡರ್ ಇವರನ್ನು ಕೂಡ ಸನ್ಮಾನಿಸಲಾಯಿತು ಸಚಿನ್ ಮಗದುಮ್ ಸ್ವಾಗತಿಸಿ ಅಕ್ಷಯ್ ದಾವಾಡೆ ನಿರೂಪಿಸಿ ಶಿವಾನಂದ ತಾರದಾಳೆ ವಂದಿಸಿದರು