ಒಳ ಮೀಸಲಾತಿ ಜಾತಿಗಣತಿಯ ಕುರಿತು ಸಮಾಜದ ಮುಖಂಡರಿಗೆ ಮಾಹಿತಿ

Information to community leaders about internal reservation caste census

ಸಂಬರಗಿ, 24 : ಚಲವಾದಿ ಸಮಾಜದ ಮುಖಂಡರಾದ ಮಹಾವೀರ ಮೋಹಿತೆ ಇವರು ಮಂಗಸೂಳಿ ಗ್ರಾಮದಲ್ಲಿ ಒಳ ಮೀಸಲಾತಿ ಜಾತಿಗಣತಿಯ ಕುರಿತು ಸಮಾಜದ ಮುಖಂಡರಿಗೆ ಮಾಹಿತಿ ನೀಡಿದ ನಂತರ ಸತ್ಕರಿಸಿದರು. ಈ ವೇಳೆ ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮೀತಿಯ ಸಂಚಾಲಕರಾದ ಸಂಜಯ ತಳವಳಕರ, ಅಥಣಿ ತಾಲೂಕಾ ಪಂಚ ಗ್ಯಾರಂಟಿ ಸಮೀತಿಯ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೆ, ಮಿಲಿನ ಒರಾಳೆ, ಸಂಜಯ ಕಾಂಬಳೆ, ವೆಂಕಟೇಶ ಕಾಂಬಳೆ ಇನ್ನೀತರು ಉಪಸ್ಥಿತ ಇದ್ದರು.