ಉಚಿತ ಯೋಗ ಶಿಬಿರ

International Yoga Day: Free Yoga Camp

ಬೆಳಗಾವಿ 07: ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್‌ ಶ್ರೀಮತಿ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರು ದಿನಗಳ ಉಚಿತ ಯೋಗ ತರಬೇತಿ ಶಿಬಿರವನ್ನು ದಿ. 16 ರಿಂದ 21 ರವರೆಗೆ ದೇವರಾಜ ಅರಸ್ ಬಡಾವಣೆಯ ವೃದ್ಧಾಶ್ರಮದ ಆವರಣದಲ್ಲಿ ಪ್ರತಿ ದಿನ ಬೆಳಿಗ್ಗೆ 5.30 ರಿಂದ 7.00 ಗಂಟೆಯವರೆಗೆ ಜರುಗಲಿದೆ.  

ಆರು ದಿನಗಳ ಕಾಲ ಪತಂಜಲಿ ಯೋಗ ಸಮಿತಿ ಬೆಳಗಾವಿಯ ಪದಾಧಿಕಾರಿಗಳು ಯೋಗ ತರಬೇತಿಯನ್ನು ನೀಡಲಿದ್ದಾರೆ.  ಈ ಯೋಗ ತರಬೇತಿ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ,ನರ ರೋಗಗಳು, ಸಂಧಿವಾತ, ಹ್ರದಯದ ವಿಕಾರಗಳು ಮುಂತಾದ ಕಾಯಿಲೆಗಳಿಗೆ ಪರಿಣಾಮಕಾರಿ ಯೋಗ ತರಬೇತಿಯನ್ನು ನೀಡಲಾಗುವುದು.  

 ಕಾರಣ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ ಯೋಗದಲ್ಲಿ ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ  95905511770 ಸಂಪರ್ಕಿಸಿ