ಸಂಬರಗಿ 29: ಜಂಬಗಿ ಗ್ರಾಮದ ಸರ್ವೇ ನಂ.22/1 ದಲ್ಲಿ ಸರ್ಕಾರಿ ನಕಾಶೆದಲ್ಲಿ ರಸ್ತೆ ಇದ್ದು, ಆ ರಸ್ತೆಯನ್ನು ಪುನರಾರಂಭ ಮಾಡಿಕೊಡಬೇಕು ಇಲ್ಲವಾದರೆ, ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಸತೀಶ ಪರಶುರಾಮ ಜಾಧವ ಎಚ್ಚರಿಕೆ ನೀಡಿದ್ದಾರೆ.
ನಕಾಶೆಯಲ್ಲಿ ಸರಕಾರಿ ರಸ್ತೆಯ ಕುರಿತು ತಾಲೂಕಾ ಪಂಚಾಯತ ಅಧಿಕಾರಿಗಳಿಗೆ ಸದರಿ ಜಮೀನನಲ್ಲಿ ರಸ್ತೆ ಇದೆ ಎಂದು ಮನವಿ ಸಲ್ಲಿಸಿದ ನಂತರ ಅವರು ಪರೀಶೀಲನೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತ ಸೂಚಿಸಿದ್ದಾರೆ. ಹಲವಾರು ವರ್ಷಗಳಿಂದ ಈ ಕುರಿತು ತಹಶೀಲ್ದಾರ, ತಾಲೂಕು ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ದಯಮಾಡಿ ಸರಕಾದ ನಕಾಶೆಯ ಪ್ರಕಾರ ರಸ್ತೆ ಮಾಡಬೇಕೆಂದು ಅವರು ಅಗ್ರಹಿಸಿದ್ದಾರೆ.