ಎಲ್ಲರೂ ಒಂದೇ ಎಂಬ ಪರಿಕಲ್ಪನೆ ನೀಡಿದ ಮಾಹಾನವ್ಯಕ್ತಿ ಯೇಸು ಕ್ರಿಸ್ತ: ಕುಂದೂರ

ಲೋಕದರ್ಶನವರದಿ

ಶಿಗ್ಗಾವಿ : ಎಲ್ಲ ಸಮುದಾಯಗಳ ಒಕ್ಕಟಿಗಾಗಿ ಯೇಸು ಕ್ರಿಸ್ತರು ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ತಾವು ಇತರಿರರಿಗೆ ಮಾದರಿಯಾಗಿ ಅಂದಿನಿಂದ ಇಂದಿನವರೆಗೂ ಕ್ರಿಸ್ಮಸ್ ದಿನಾಚರಣೆಯನ್ನು ಅತಿ ವಿಜಂಭೃಣೆಯಿಂದ ಆಚರಿಸುತ್ತಾ ಬಂದಿದ್ದಾರೆ ಎಂದು ಕುರುಬ ಸಮಾಜದ ಅಧ್ಯಕ್ಷ ಪಕ್ಕೀರಪ್ಪ ಕುಂದೂರ ಹೇಳಿದರು.

ಪಟ್ಟಣದ ನವಜೀವನ ಸೇವಾ ಮಂಡಲದ ಚರ್ಚನ ಅವರಣ ಸಂಯುಕ್ತಾಶ್ರಯದಲ್ಲಿ  ಯೇಸು ಕ್ರಿಸ್ತರ ಜನ್ಮ ದಿನಾಚರಣೆಯ ನಿಮಿತ್ಯ ನೆಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಜಾತಿ ಧರ್ಮ ಬೇಧ ಎಲ್ಲವನ್ನು ಮರೆತು ಎಲ್ಲ ಸಮಾಜದ ಸಮಸ್ತ ಸಾರ್ವಜನಿಕರು ಒಂದು ಎಂದು ಪರಿಕಲ್ಪನೆಯನ್ನು ನೀಡಿದ ಮಹಾನವ್ಯಕ್ತಿ ಅವರೇ ಯೇಸು ಕ್ರಿಸ್ತರು ಎಂದು ಹೇಳಿದರು.

ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ ದೈವಜ್ಞ ಮಾತನಾಡಿ 2019 ವರ್ಷಗಳ ಹಿಂದೆ ಅನೇಕ ಸಣ್ಣ ಸಣ್ಣ ಸಮಾಜಗಳು ತುಳಿತಕೊಳ್ಳಪಟ್ಟಿದ್ದವು ಅಂದು ಎಲ್ಲರೂ ಕೈಸ್ತ ಧರ್ಮದ ಪರಿಪಾಲನೆಗೆ ಒಳಗಾಗಿ ಇಂದು ಅವರ ಸಮುದಾಯವನ್ನು ಮರೆತು ಅನೇಕ ಸಾರ್ವಜನಿಕರು ಕೈಸ್ತ ಧರ್ಮದ ಆಚಾರ ವಿಚಾರಗಳಿಗೆ ಬದ್ಧರಾಗಿದ್ದಾರೆ ಎಂದರು.

ದಲಿತ ಮುಖಂಡ ಅಶೋಕ ಕಾಳೆ ಮಾತನಾಡಿ ಕೈಸ್ತ ಧರ್ಮದ ಮುಖಾಂತರ ಅನೇಕ ಬಡ ಸಮುದಾಯದ ಮಕ್ಕಳಿಗೆ ಆಥರ್ಿಕವಾಗಿ ಮತ್ತು ಶೈಕ್ಷಣಿಕವಾಗಿ ಅನುಕೂಲವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ದುಂಡಶಿಯ ಕೈಸ್ತ ಧರ್ಮದ ಬಸವರಾಜ ಸಾಮೂಹಿಕವಾಗಿ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥನೆಯನ್ನು ಮಾಡಿದರು. ಜಿಲ್ಲಾ ಜಿ.ವಿ.ಕ ಸಂಚಾಲಕ ಸುರೇಶ ಹರಿಜನ,  ಟಿ ಸುಂದರನಾಯಕ, ವ್ಯವಸ್ಥಾಪಕ ಹೃದಯಾನಂದ ಬೆಬರತ, ನವಜೀವನ ಸೇವಾ ಮಂಡಲದ ಸಿಬ್ಬಂದಿಗಳಾದ ಶರಣಪ್ಪ, ಸಂಗೀತಾ, ಜ್ಯೋತಿ ಹಾಗೂ ಕೈಸ್ತ ಧರ್ಮದ ಬಂದು ಬಾಂಧವರು ಮತ್ತು ಅಭಿಮಾನಿಗಳು ಹಾಗೂ ಮುದ್ದು ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು. ನಂತರ ಮುದ್ದು ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು