ಲೋಕದರ್ಶನ ವರದಿ
ಕೊಪ್ಪಳ 27: ಅಕ್ರಮವಾಗಿ ಸಂಗ್ರಹಿಸಿದ್ದ ನಿಷೇದಿತ ಪಾನಮಸಾಲ-ತಂಬಾಕು ಗೋದಾಮಿನ ಪೋಲೀಸರು ದಾಳಿ ಮಾಡಿ ಓರ್ವನ ಬಂಧಿಸಿ 50 ಲಕ್ಷ ರೂ.ಮೌಲ್ಯದ 540 ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕಮಾರ್ ಹೇಳಿದರು.
ಅವರು ಬುಧುವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ಗಿಣಿಗೇರಾ ಗ್ರಾಮದ ಹೊರವಲಯದಲ್ಲಿರುವ ಗೋದಾಮವೊಂದರಲ್ಲಿ ನಿಷೇದಿತ ಪಾನಮಸಾಲ-ತಂಬಾಕು ಪಾಕೇಟ್ಗಳನ್ನು ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಪೋಲೀಸರು ದಾಳಿ ನಡೆಸಿದ್ದಾರೆ. ಗಿಣಿಗೇರಾ ಗ್ರಾಮದ ರೇಲ್ವೆ ಹಳಿಗಳ ಪಕ್ಕದಲ್ಲಿ ಮಾರಾಟದಲ್ಲಿ ತೊಡಗಿದ್ದ ನಜೀರ್ ಅಹ್ಮದ್ ಪೊಲೀಸ್ ಪಾಟೀಲ್ (39) ಎಂಬುತನನ್ನು ವಶಪಡಿಸಿಕೊಂಡು ದಸ್ತುಗಿರಿ ಮಾಡಲಾಗಿದೆ, ಇದರಲ್ಲಿ ಪಾನಮಸಾಲ-ತಂಬಾಕು ಪ್ಯಾಕೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾನಮಸಾಲ-ತಂಬಾಕು ಪ್ಯಾಕೇಟ್ಗಳ ಸಂಗ್ರಹಕ್ಕೆ ಸಂಬಂಧಿಸಿದ ಯಾವುದೇ ಕಾಗದ-ಪತ್ರಗಳು ಲಭ್ಯವಾಗಿ, ಪ್ರಾಥಮಿಕ ತನಿಖೆಯಿಂದ ಪಾನಮಸಾಲ-ತಂಬಾಕು ವಿಷಕಾರಿಯಿಂದ ಕೂಡಿದ್ದು ಎಂಬುದು ಕಂಡುಬರುತ್ತದೆ. ಪ್ರಕರಣದಲ್ಲಿ ಜಪ್ತಿ ಮಾಡಿದ ಮಾಲು ಎಲ್ಲಿ ತಯಾರಿಸಲಾಗುತ್ತಿತ್ತು ಅದಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಎಲ್ಲಿಂದ ತರಿಸಲಾಗುತ್ತಿತ್ತು ಎಲ್ಲೆಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆಯುತ್ತದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಡಿವೈಎಸ್ಪಿ ಎಸ್.ಎಸ್.ಹುಲ್ಲೂರು, ಗ್ರಾಮೀಣ ಪಿಎಸ್ಐ ಗುರುರಾಜ್ ಕಟ್ಟಿಮನಿ, ಜಿಲ್ಲಾ ಆರೋಗ್ಯ ಸರ್ವೆರ್ಕ್ಷಣಾಧಿಕಾರಿ ಡಾ.ಎಂ.ಎಂ.ಕಟ್ಟಿಮನಿ, ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.