ನಿಡಗುಂದಿ ಗ್ರಾಮದ ಲಕ್ಷ್ಮೀದೇವಿ, ಬಸವೇಶ್ವರ ಜಾತ್ರಾ ಮಹೋತ್ಸವ

Lakshmi Devi and Basaveshwara Jatra Festival in Nidagundi village

ರಾಯಬಾಗ 29: ತಾಲೂಕಿನ ನಿಡಗುಂದಿ ಗ್ರಾಮದ ಲಕ್ಷ್ಮೀದೇವಿ, ಗುರು ಸಿದ್ಧೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವವು ವಿಜೃಂಭನೆಯಿಂದ ಜರುಗಿತು.  

ಮಂಗಳವಾರ ವಿವಿಧ ಶರ್ಯತ್ತುಗಳು ಜರುಗಿದವು. ಶರ್ಯತ್ತಿನಲ್ಲಿ ವಿಜೇತರಾದವರಿಗೆ ಕಮೀಟಿಯಿಂದ ಬಹುಮಾನಗಳನ್ನು ವಿತರಿಸಿ, ಗುರುಸಿದ್ಧೇಶ್ವರ ದೇವರಿಗೆ ನೈವೇದ್ಯ ಅರ​‍್ಿಸಲಾಯಿತು. ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.  

ಜೋಡು ಕುದುರೆ ಗಾಡಿ ಶರ್ಯತ್ತಿನಲ್ಲಿ ಅರಗದ ರಾಜು ನಾಯಿಕ ಪ್ರಥಮ, ನಂದಿಕುರಳಿಯ ಶಿವಪ್ಪ ಖಿಲಾರೆ ದ್ವಿತೀಯ, ಕೆಂಪಟ್ಟಿಯ ಬಸವರಾಜು ತೃತೀಯ ಬಹುಮಾನ ಪಡೆದುಕೊಂಡರು.  

ಸ್ಲೋಸಾಯಕಲ್ ಸ್ಪರ್ಧೆಯಲ್ಲಿ ಪ್ರಜ್ವಲ ಚೌಗುಲೆ ಪ್ರಥಮ ಸುಪ್ರಿತ ಪತ್ತಾರ ದ್ವಿತೀಯ, ವಿವೇಕ ಗಡದೆ ತೃತೀಯ ಸ್ಥಾನ ಪಡೆದರು. ಓಡುವ ಶರ್ಯತ್ತಿನಲ್ಲಿ ಶಿವಾನಂದ ನಾಯಿಕ ಪ್ರಥಮ, ಪರಸಪ್ಪ ಹಸರೆ ದ್ವಿತೀಯ, ನಾಗರಾಜ ಜಮಖಂಡಿ ತೃತೀಯ ಬಹುಮಾನ ಪಡೆದರು. ಕುದುರೆ ಶರ್ಯತ್ತಿನಲ್ಲಿ ಸುರೇಶ ಚಿಂಚಲಿ ಪ್ರಥಮ, ಸುಂದರಿಪ್ರೇಮ ಕೆಂಪಟ್ಟಿ ದ್ವಿತೀಯ, ವಿಷ್ಣು ಭಂಡಾರೆ ತೃತೀಯ ಬಹುಮಾನ ಪಡೆದರು. ಸಾಯಕಲ್ ಶರ್ಯತ್ತಿನಲ್ಲಿ ಬಾಳು ಹಿರೇಮಠ ಪ್ರಥಮ, ಕರಣ ಲಮಾಣಿ ದ್ವಿತೀಯ, ದರ್ಶನ ದೇಸಾಯಿ ತೃತೀಯ ಬಹುಮಾನ ಪಡೆದರು. ರಂಗೋಲಿ ಸ್ಪರ್ಧೆಯಲ್ಲಿ ಪ್ರೇಮಾ ಕಟಾಂವಿ ಪ್ರಥಮ, ಪ್ರೀತಿ ಪಾಟೀಲ ದ್ವಿತೀಯ, ತ್ರಿಶಿಲಾ ಪಾಸಾನೆ ತೃತೀಯ ಹಾಗೂ ದೀಪಾ ಹಳಾಜೆ ಚತುರ್ಥ ಸ್ಥಾನ ಪಡೆದುಕೊಂಡರು.  

ವಿಜೇತರಿಗೆ ಗ್ರಾ.ಪಂ.ಸದಸ್ಯ ಅರುಣ ಐಹೊಳೆ, ಲಕ್ಷ್ಮಣ  ಗವಾಣಿ, ಗೋರಕನಾಥ ನಾಯಿಕ, ಪ್ರಭು ಭಿರಡಿ, ಅಣ್ಣಾಸಾಹೇಬ ಖೆಮಲಾಪೂರೆ, ಸುಕುಮಾರ ಖೆಮಲಾಪೂರೆ, ಬಾಳೇಶ ಹಳಾಜೆ, ಯಮನಪ್ಪ ಭಜಂತ್ರಿ, ಸದಾಶಿವ ಟೊಂಬರೆ, ಜಿನ್ನೇಂದ್ರ ಖೆಮಲಾಪೂರೆ ಹಾಗೂ ಜಾತ್ರಾ ಕಮೀಟಿ ಸದಸ್ಯರು ಬಹುಮಾನ ವಿತರಿಸಿದರು.