ರೈತ ಹೆಚ್ಚಿನ ಸಮಯವನ್ನು ಕೃಷಿಯ ಸಂಶೋಧನೆಗೆ ಮೀಸಲಿಡಲಿ

ಲೋಕದರ್ಶನವರದಿ

ಶಿಗ್ಗಾವಿ : ಕೃಷಿಯಲ್ಲಿ ಸಮಸ್ಯೆ ಇರುವುದು ಸತ್ಯ ಹಾಗೇಯೇ ಆ ಸಮಸ್ಯೆಗೆ ಪರಿಹಾರವೂ ಇದೆ, ಅದನ್ನು ರೈತರು ಹುಡುಕಲು ಮುಂದಾಗಬೇಕು ರೈತನಿಗೆ ಎಂತಹ ಕಷ್ಟದ ಸಂದರ್ಭವೇ ಬರಲಿ ಸೋತು ಸಾವನ್ನ ಅಪ್ಪಿಕೊಳ್ಳುವುದಕ್ಕಿಂತ ಮತ್ತೆ ದುಡಿದು ಜೀವನ ಕಟ್ಟಿಕೊಳ್ಳುವ ಕಡೆಗೆ ರೈತ ಮುಂದಾಗಬೇಕು ಎಂದು ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ಮುಖ್ಯಸ್ಥರಾದ ಡಾ, ಸಿ ಪಿ ಮನ್ಸೂರ್ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಮತ್ತು ತಾಲೂಕಿನ ವಿವಿಧ ರೈತ ಸಂಘಗಳ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು  ರೈತರಿಗೆ ಬೇಸಾಯವೆಂದರೆ ನೀಸಾಯಿ, ನಾಸಾಯಿ ಕೊನೆಗೆ ಮನೆ ಮಂದಿಯಲ್ಲ ಸಾಯಿ ಎಂಬ ಸ್ಥಿತಿ ನಿಮರ್ಾಣವಾಗಿದೆ, ಇಂದು ಮನೆ ಮಂದಿಯಲ್ಲ ಸೇರಿ ಕೃಷಿಕರಾಗಬೇಕು, ಕೂಡಿ ದುಡಿಯಬೇಕು, ಹೆಚ್ಚಿನ ಸಮಯವನ್ನ ರೈತರು ಕೃಷಿಯ ಸಂಶೋಧನೆಗೆ ಮೀಸಲಿಡಲು ಮುಂದಾಗಬೇಕು ಸಮಸ್ಯೆ ಇದ್ದಾಗಲೇ ತಾನೇ ಪರಿಹಾರ ಹುಡಬೇಕು ಎಂಬುವ ಮನೋಜ್ಞಾನ ನಮ್ಮ ರೈತರಿಗೆ ಬೇಡ,  ತಮ್ಮ ಜೀವನ ಹಸನಾಗಲು ಕಷ್ಟ ಪಟ್ಟು ದುಡಿಯಬೇಕು ಅಂದಾಗ ಮೂಲ ಕೃಷಿ ಪದ್ಧತಿ ಮೂಡಿಬರಲು ಸಾಧ್ಯವಿದೆ, ಎಂದು ಸಲಹೆ ನೀಡಿದರು. 

ಪ್ರಗತಿಪರ ಕೃಷಿ ಚಿಂತಕ ಎಸ್ ಎಸ್ ದೇಸಾಯಿ ಮಾತನಾಡಿ, ಮಾರುಕಟ್ಟೆ ವಿಷಯಯಕ್ಕೆ ಸಂಬಂಧಿಸಿದಂತೆ ರೈತರಿಗೆ ನಾಚಿಕೆ ಮನೋಭಾವವಿದೆ ಅದು ಬೇಡ, ಉಸಿರು ನಿಲ್ಲುವ ಮೊದಲು ಹೆಸರು ಮೆರೆಯಬೇಕು ಆ ರೀತಿ ರೈತರ ಸಾಧನೆ ಬೇಕಿದೆ, ರೈತ ಏಕಾಂಗಿಯಲ್ಲ ಅವನಿಗೆ ಸರಕಾರಗಳಿವೆ, ಪ್ರೋತ್ಸಾಹಪೂರಕ ಕೃಷಿ ಇಲಾಖೆಗಳಿವೆ ಅದನ್ನು ಮನಗಂಡು ಪ್ರಗತಿಪರ ಕೃಷಿಯತ್ತ ರೈತ ವಾಲಬೇಕು ಎಂದ ಅವರು ರಾಜಕೀಯದವರ ಮಾತಿನಿಂದ ರೈತರ ಹೊಟ್ಟೆ ತುಂಬುವುದಿಲ್ಲ ರೈತರ ಹಿತಕಾಯುವ ಕೃಷಿ ಯೋಜನೆಗಳು ಬರಬೇಕು ಅದನ್ನು ಸರಕಾರಗಳು ಸಹಿತ ರೂಪಿಸಬೇಕು. ರೈತ ಸಂಘದ ತಾಲೂಕಾಧ್ಯಕ್ಷ ಬಸಲಿಂಗಪ್ಪ ನರಗುಂದ ಮಾತನಾಡಿ, ರೈತರಿಗೆ ಶೇಂಗಾ, ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಅವಶ್ಯಕ ಬೆಳೆಗಳ ಖರೀದಿ ಕೇಂದ್ರ ತೆರೆಯಬೇಕು ಜೊತೆಗೆ ಬೆಳೆಗೆ ಬೆಂಬಲ ಬೆಲೆಯಯನ್ನೂ ಸಹಿತ ನೀಡಲು ಮುಖ್ಯಮಂತ್ರಿಗಳನ್ನ ಒತ್ತಾಯಿಸಿದ ಅವರು, ಚುನಾವಣಾ ಪೂರ್ವದಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಅದನ್ನು ಮರೆತಿದ್ದಾರೆ, ರೈತರನ್ನು ಕೇವಲ ಮತಕ್ಕಾಗಿ ಇಟ್ಟುಕೊಳ್ಳದೇ ರೈತರಿಗೆ ನೆರವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ 2018-19 ಮತ್ತು 2019-20 ನೇ ಸಾಲಿನ ಆತ್ಮಾ ಯೋಜನೆ ಅಡಿ ತಾಲೂಕಾ ಮಟ್ಟದ ಶ್ರೇಷ್ಟ ಯುವ ಕೃಷಿಕ ಹಾಗೂ ಮಹಿಳಾ ಕೃಷಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅದ್ಯಕ್ಷೆ ಪ್ರೇಮಾ ಪಾಟೀಲ, ಸದಸ್ಯರಾದ ಹನುಮರೆಡ್ಡಿ ನಡುವಿನಮನಿ, ಸಹಾಯಕ ಕೃಷಿ ಅಧಿಕಾರಿ ಸುರೇಶ ದೀಕ್ಷೀತ್, ಧಾರವಾಡದ ಸಂಪನ್ಮೂಲ ವ್ಯಕ್ತಿ ವಿ ವಿ ಗುಡ್ಡದ, ತಾಪಂ ಸದಸ್ಯ ಶ್ರೀಕಾಂತ ಪೂಜಾರ, ಎಪಿಎಂಸಿ ಕಾರ್ಯದಶರ್ಿ ಎಂ ವಿ ವೆಂಕಟೇಶ, ರೈತ ಸಂಘಗಳ ಅದ್ಯಕ್ಷರುಗಳಾದ ಮುತ್ತು ಗುಡಗೇರಿ, ಮಂಜುನಾಥ ಕಂಕಣವಾಡ ರೈತ ಮುಖಂಡರಾದ ಮಂಜುನಾಥ ಹಾವೇರಿ, ಬಸಲಿಂಗಪ್ಪ ಮಲ್ಲೂರ, ಮಲ್ಲಮ್ಮ ಸೊಮನಕಟ್ಟಿ, ಮಲ್ಲೇಶ ವಾಲ್ಮೀಕಿ, ಚೆನ್ನಪ್ಪ ಚಿನ್ನಪ್ಪನವರ, ಮಂಜುನಾಥ ವಾಲಿಕಾರ, ರತ್ನಾ ಕೋಣನವರ ಸೇರಿದಂತೆ ತಾಲೂಕಿನ ರೈತ ಮುಖಂಡರು ಹಾಗೂ ರೈತರು ಮತ್ತು ಕೃಷಿ ಇಲಾಖೆಯ ಸರ್ವ ಸಿಬ್ಬಂದಿ ಇದ್ದರು.