ರಾಯಬಾಗ 24: ಪಾಕಿಸ್ತಾನ ವಿರುದ್ಧ ಅಪರೇಷನ್ ಸಿಂಧೂರ ಕಾರ್ಯಾಚರಣೆ ಮಾಡುವುದರ ಮೂಲಕ ಭಾರತ ತನ್ನ ಸೈನ್ಯ ಶಕ್ತಿಯನ್ನು ವಿಶ್ವಕ್ಕೆ ತೋರಿಸಿ ಕೊಟ್ಟಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ಪಟ್ಟಣದ ಅಂಬಾಭವಾನಿ ಮಂದಿರದಿಂದ ಅಭಾಜಿ ವೃತ್ತದವರೆಗೆ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ, ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದಕ್ಕೆ ತಕ್ಕ ಪ್ರತೀಕಾರ ಭಾರತೀಯ ಸೈನ್ಯ ಪಾಕಿಸ್ತಾನ ವಿರುದ್ಧ ತೀರಿಸಿಕೊಂಡಿದೆ. ಸೈನಿಕರ ನೈತಿಕ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶವನ್ನು ಸಂರಕ್ಷಿಸುವ ದೇಶದ ಸೈನಿಕರನ್ನು ನಾವು ಸದಾ ಗೌರವಿಸಬೇಕೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ಶಿವಶಂಕರ ಸ್ವಾಮೀಜಿ, ವೀರಭದ್ರ ಸ್ವಾಮೀಜಿ, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಮುಖಂಡರಾದ ಸತೀಶ ಅಪ್ಪಾಜಿಗೋಳ, ಪೃಥ್ವಿರಾಜ ಜಾಧವ, ಭರತೇಶ ಬನವಣೆ, ಮಹೇಶ ಭಾತೆ, ರಾಜು ದೇಶಪಾಂಡೆ, ಎಲ್.ಬಿ.ಚೌಗಲಾ, ವಿ.ಎಸ್.ಪೂಜಾರಿ, ಜಯದೀಪ ದೇಸಾಯಿ, ಶಿವಾನಂದ ಬಂತೆ, ಅಪ್ಪು ಪವಾರ, ಅನೀಲ ಶೆಟ್ಟಿ, ಸದಾಶಿವ ಘೋರೆ್ಡ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಆನಂದ ಹೊಸಮನಿ ಹಾಗೂ ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾಲೇಜ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.