ಮೃತ ಕುಟುಂಬಕ್ಕೆ ಶಾಸಕ ನಾಡಗೌಡ ಪರಿಹಾರ ಚೆಕ್ ವಿತರಣೆ

MLA Nadagowda distributes compensation check to deceased family

ತಾಳಿಕೋಟಿ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಏಪ್ರಿಲ್ 27ರಂದು ಸಿಡಿಲು ಬಡಿತದಿಂದ ಮೃತರಾದ ರೈತ ಅಯ್ಯಣ್ಣ ಸಜ್ಜನ ಇವರ ಕುಟುಂಬಕ್ಕೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಅಪ್ಪಾಜಿ ನಾಡಗೌಡರು ಸಾಂತ್ವನ ಹೇಳಿ ಸರ್ಕಾರದಿಂದ ಬಿಡುಗಡೆಗೊಂಡ ರೂ.5 ಲಕ್ಷ ಮೊತ್ತದ ಚೆಕ್‌ನ್ನು ಮೃತರ ಧರ್ಮಪತ್ನಿ ಸುವರ್ಣಾ ಸಜ್ಜನ ಇವರಿಗೆ ಹಸ್ತಾಂತರಿಸಿದರು.  

ಮಂಗಳವಾರ ಬಳಗಾನೂರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಅಪ್ಪಾಜಿ ನಾಡಗೌಡರು ಮೃತ ರೈತನ ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು. ಮಾತನಾಡಿದ ಅವರು ಮೃತ ರೈತ ಅಯ್ಯಣ್ಣ ಸಜ್ಜನ ಅವರ ಅಕಾಲಿಕ ನಿಧನದಿಂದಾಗಿ ಅವರ ಕುಟುಂಬಕ್ಕೆ ತುಂಬಾ ತೊಂದರೆಯಾಗಿದೆ. ಏಕೆಂದರೆ ಅವರು ತಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಆದರೆ ಇದು ವಿಧಿ ಲಿಖಿತ ಇದಕ್ಕೆ ಕುಟುಂಬದ ಸದಸ್ಯರು ಧೈರ್ಯ ತೆಗೆದುಕೊಳ್ಳಬೇಕು. ಈ ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಾನೂ ಇದ್ದೇನೆ ಎಂದರು.  

ತಹಸಿಲ್ದಾರ್ ಡಾ.ವಿನಯಾ ಹೂಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ(ನಾವದಗಿ), ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಗ್ರಾಮದ ಗಣ್ಯರಾದ ಮಲ್ಲಣ್ಣ ದೋರನಹಳ್ಳಿ, ಚನ್ನಣ್ಣ ದೇಸಾಯಿ ಪ್ರಭುಗೌಡ ಬಿರಾದಾರ, ಎಸ್‌.ಐ. ಕಡಕೋಳ,ಆರ್‌.ಎಸ್‌.ವಾಲಿಕಾರ, ಅಮರ​‍್ಪ ಬಿರಾದಾರ ಹಾಗೂ ಗ್ರಾಮಸ್ಥರು ಇದ್ದರು.