ಜನರ ಬೇಡಿಕೆಗೆ ತಕ್ಕಂತೆ ಪ್ರಾಮಾಣಿಕ ಕೆಲಸ ಮಾಡುವೆ ಶಾಸಕ ಪಠಾಣ

MLA Pathana works honestly according to people's demands

ಜನರ ಬೇಡಿಕೆಗೆ ತಕ್ಕಂತೆ ಪ್ರಾಮಾಣಿಕ ಕೆಲಸ ಮಾಡುವೆ ಶಾಸಕ ಪಠಾಣ

ಶಿಗ್ಗಾವಿ 13  : ಜನಸೇವೆ ಮಾಡಲು ಅವಕಾಶ ಕೊಟ್ಟ ಈ ಜನತೆಯ ನಂಬಿಕೆ ಉಳಿಸಿಕೊಂಡು, ಜನರ ಬೇಡಿಕೆಗೆ ತಕ್ಕಂತೆ ಪ್ರಾಮಾಣಿಕ ಕೆಲಸ ಮಾಡುವದಾಗಿ ಶಾಸಕ ಯಾಸೀರಖಾನ್ ಪಠಾಣ ಹೇಳಿದರು.   ತಾಲೂಕಿನ ಬಸವನಕಟ್ಟಿ, ಭದ್ರಾಪೂರ, ಬಂಕಾಪೂರ, ಹುಲಸೋಗಿ ಗ್ರಾಮದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಕ್ಷೇತ್ರದ ಜನತೆ ಭರವಸೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದು ಅವರ ಭರವಸೆಗೆ ತಕ್ಕಂತೆ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ ಎಂದರು.ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನತೆ ಸ್ವಾವಲಂಬಿಯಾಗಿ ಬದುಕು ನಡೆಸುವಂತಾಗಿದೆ. ಆದರೆ ಕೆಲವರು ಅನ್ನಭಾಗ್ಯ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬರುತ್ತಿದೆ. ಸಾರ್ವಜನಿಕರು ಸಹ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕಾಧ್ಯಕ್ಷ ಶೇಖಪ್ಪ ಮಣಕಟ್ಟಿ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಗ್ರಾಮ ಪಂಚಾಯತಿ ಸದಸ್ಯ ಸುಧೀರ ಲಮಾಣಿ, ಮಹಾಂತೇಶ ಸಾಲಿ, ಚಂದ್ರು, ಯಲ್ಲಪ್ಪ ನರಗುಂದ, ಮಂಜುನಾಥ ತಿಮ್ಮಾಪೂರ, ಮುನ್ನಾ ಲಕ್ಷ್ಮೇಶ್ವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.