ಲೋಕದರ್ಶನವರದಿ
ರಾಣಿಬೆನ್ನೂರ: ಹೆಚ್.ಐ.ವಿ ಸೋಂಕು ರೋಗವು ನಿವಾರಣೆಯಾಗುವಂತಹದ್ದೇನಲ್ಲ. ಅಂತಹವರಿಗೆ ಕೀಳರಮಿಯೆಯಿಂದ ಕಾಣದೇ, ಆತ್ಮಸ್ಥೈರ್ಯ ಮತ್ತು ವಿಶ್ವಾಸ ತುಂಬುವ ಕೆಲಸ ಪ್ರತಿಯೊಬ್ಬ ನಾಗರೀಕರು ಮಾಡಲು ಮುಂದಾಗಬೇಕು ಎಂದು ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಕಾಲೇಜು ಪ್ರಾಚಾರ್ಯ ಪಿ. ಮುನಿಯಪ್ಪ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಕಾಲೇಜು ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ, ರೆಡ್ರಿಬ್ಬನ್ ಕ್ಲಬ್,ಹಸಿರು ಪಡೆ ಸಂಯುಕ್ತ ಆಯೋಜಿಸಿದ್ದ, ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಚ್.ಐ.ವಿ ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆಗಿಂತ ಆತ್ಮಸ್ಥೈರ್ಯ ತುಂಬಬೇಕು ಅಂತಹ ವ್ಯಕ್ತಿಗಳಿಗೆ ಸಮುದಾಯವು ಜೊತೆಯಾಗಿ ನಿಲ್ಲಬೇಕು. ವಿದ್ಯಾರ್ಥಿಗಳು ಇಂತಹ ಮಾರಕ ರೋಗಕ್ಕೆ ಬಲಿಯಾಗದೆ ಇದರ ಬಗ್ಗೆ ತಿಳಿದುಕೊಂಡು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೆಕೇಂದು ಕರೆ ನೀಡಿದರು.
ರಾಣೇಬೆನ್ನೂರಿನ ಸಕರ್ಾರಿ ಆಸ್ಪತ್ರೆಯ ಆಪ್ತಸಮಾಲೋಚನಾಧಿಕಾರಿ ಮಾರುತಿ.ಹೆಚ್.ಬಿ ಮಾತನಾಡುತ್ತ ನಮ್ಮ ದೇಶದಲ್ಲಿ ಈ ಸೋಂಕುರೋಗ 1986ರಲ್ಲಿ ಮೊದಲ ಬಾರಿಗೆ ಹೆಚ್.ಐ.ವಿ ವೈರಸ್ ಕಾಲಿಟ್ಟಿದ್ದು ಕನರ್ಾಟಕ ರಾಜ್ಯದಲ್ಲಿ 1987ರಲ್ಲಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಕಾಣಿಸಿಕೊಂಡಿತ್ತು ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ 2002ರಿಂದ ಆಕ್ಟೋಬರ್ 2019ರವರೆಗೆ 410815 ಜನರನ್ನು ಪರೀಕ್ಷೆ ಮಾಡಲಾಗಿದೆ ಅದರಲ್ಲಿ 8251 ಜನರಿಗೆ ಹೆಚ್.ಐ.ವಿ ಸೋಂಕಿತರಿದ್ದು ಇವರು ಚಿಕಿತ್ಸೆ ಪಡೆಯುತ್ತಿದ್ದರೆ.
ರಾಣೇಬೆನ್ನೂರು ತಾಲೂಕಿನಲ್ಲಿ 650 ಸೋಂಕಿತರಿದ್ದು ಇದರಲ್ಲಿ 450 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಮತ್ತು ಹಾವೇರಿ ಜಿಲ್ಲೆಯಲ್ಲಿ 38648 ಗರ್ಭಿಣಿ ಹೆಣ್ಣು ಮಕ್ಕಳಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿದ್ದು ಅದರಲ್ಲಿ 644 ಗರ್ಭಿಣಿ ಹೆಚ್.ಐ.ವಿ ಸೋಂಕಿತರಿದ್ದಾರೆ ಎಂದು ತಿಳಿದು ಬಂದಿದೆ ಆದ್ದರಿಂದ ವಿದ್ಯಾರ್ಥಿಗಳು ಇದರ ಬಗ್ಗೆ ಅರ್ಥಮಾಡಿಕೊಂಡು ಜೀವನವನ್ನು ನೆಡೆಸಬೇಕೆಂದರು.
ಯೋಜನಾಧಿಕಾರಿ ಹೆಚ್.ಶಿವಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶುಶ್ರೂಷಕರಾದ ಮಧು ಮತ್ತಿಹಳ್ಳಿ ಎಂ. ಶಿವಕುಮಾರ, ಹೆಚ್.ಪಿ ರಂಗಣ್ಣವರ, ಶಕ್ತಿ ಸರ್ವದೆ, ಶಿಕ್ಷಕರಾದ ಕೆ,ಜೆ.ಆಶಾ,ಸಿ.ಜೈ.ಪ್ರಕಾಶ್ ಉಮ್ಮೇಅಬೀಬಾ, ಆರ್.ಪ್ರವೀಣಕುಮಾರ್, ಪ್ರಸನ್ನ.ಜಿ.ಬಿ. ಸೇರಿದಂತೆ ಮತ್ತಿತರ ಗಣ್ಯರು, ಶಿಕ್ಷಕರು ಉಪಸ್ಥಿತರಿದ್ದರು