ಬೆಳಗಾವಿ, ಮೇ.21: ರಾಯಬಾಗ ತಾಲೂಕಿನ ಸವಸುದ್ಧಿ ಗ್ರಾಮದ 33 ವರ್ಷ ವಯಸ್ಸಿನ ಸಂತೋಷ ಅಶೋಕ ಪಾಟೀಲ ಎಂಬ ವ್ಯಕ್ತಿ, ವಕೀಲ ವೃತ್ತಿ ಮಾಡುತ್ತಿದ್ದು, ಕೆಲಸಕ್ಕೆ ಹೋಗುತ್ತೆನೆ ಎಂದು ಮನೆಯಿಂದ ಹೊದವನು ಮರಳಿ ಮನೆಗೆ ಬಾರದೆ ಕಾಣಿಯಾಗಿದ್ದಾನೆ ಎಂದು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತಾರೆ.
ಕಾಣೆಯಾದ 33 ವರ್ಷ ವಯಸ್ಸಿನ ವ್ಯಕ್ತಿ 5 ಅಡಿ ಎತ್ತರ, ಸದೃಡ ಮೈಕಟ್ಟು, ಗೋದಿ ಮೈ ಬಣ್ಣ, ದುಂಡು ಮುಖ ಕಪ್ಪು ಕೂದಲು, ಕನ್ನಡ ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಶರ್ಟ ಹಾಗೂ ಕಪ್ಪು ಚೆಕ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಕಾಣಿಯಾದ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ರಾಯಬಾಗ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ : 225333(08331), 9480804060 ಗೆ ಸಂಪರ್ಕಿಸಬಹುದಾಗಿದೆ ಎಂದು ರಾಯಬಾಗ ಪೊಲೀಸ್ ಠಾಣೆಯ ಪಿ.ಎಸ್.ಐ (ಕ್ಘಾಸು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.