ಲೋಕದರ್ಶನವರದಿ
ರಾಣೇಬೆನ್ನೂರು30: ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಸವಿ ನೆನಪಿಗಾಗಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಮತ್ತು ನಗರದ ಎಲ್ಲ ವಾಡರ್್ಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು, ನಗರಸಭಾ ಸದಸ್ಯರು ಸಾಮೂಹಿಕವಾಗಿ ಗುರುವಾರ ಸಂಜೆ ಸಾರ್ವಜನಿಕವಾಗಿ ಬೊಂದೆ ಉಂಡೆಗಳನ್ನು ಮನೆ-ಮನೆಗೆ ತೆರಳಿ ಹಂಚಿದರು. ನಂತರ ಕುರಬಗೇರಿ ವೃತ್ತದಲ್ಲಿ ಸಾರ್ವಜನಿಕವಾಗಿ ಬೀರಂಜಿ, ಮುಳಗಾಯಿ ಎಣಗಾಯಿ ಪಲ್ಲೆ, ಖಡಕ್ ರೊಟ್ಟಿ, ಚಟ್ನಿ, ಅನ್ನ-ಸಾಂಬಾರು, ವಿತರಿಸಿ ಸಂಭ್ರಮಿಸಿದರು.
ಕಳೆದ ಎರಡು ದಿವಸಗಳಿಂದ ಕಾರ್ಯಕರ್ತರು ಉಂಡೆಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇಂದು 50 ಸಾವಿರಕ್ಕೂ ಹೆಚ್ಚು ಬೊಂದೆ ಉಂಡೆಗಳನ್ನು ವಾಡರ್್ಗಳಲ್ಲಿ ಸಂಚರಿಸಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪರಮೇಶ ಗೂಳಣ್ಣನವರ, ಚನ್ನಬಸಪ್ಪ ತೋಟಪ್ಪನವರ, ಪ್ರಕಾಶ ಬುರಡಿಕಟ್ಟಿ, ಸೋಮಶೇಖರ ಗೌಡಶಿವಣ್ಣನವರ, ತಿಪ್ಪೇಶ್ ಗೊಗ್ಗದ, ಮಂಜುನಾಥ ಶ್ಯಾಮನೂರ, ಕುಮಾರ ಪಾಟೀಲ, ಗದಿಗೆಪ್ಪ ಮಾಕನೂರ, ಶಿವಪ್ಪ ಬುರಡಿಕಟ್ಟಿ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.