ಮಹಾಲಿಂಗಪುರ 28: ನಗರದ ಶ್ರೀರಾಮ ಸೇನಾ ಹಿಂದೂಸ್ತಾನ್ ಜಿಲ್ಲಾಧ್ಯಕ್ಷ ನಾಗರಾಜ ಮಹಾದೇವ ಭಜಂತ್ರಿಯವರು ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ,ಹೀಗೆ ಲಲಿತ ಕಲೆಗಳ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದನ್ನು ಪರಿಗಣಿಸಿ “ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ” ವತಿಯಿಂದ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮುಂದಿನ ದಿನಮಾನಗಳಲ್ಲಿ ರಾಜ್ಯ ,ರಾಷ್ಟ್ರ, ಅಂತರಾಷ್ಟ್ರೀಯ, ಮಟ್ಟದಲ್ಲಿ ಸಾಧನೆ ಮಾಡಿ ಹೆತ್ತ ತಂದೆ-ತಾಯಿ ಪೋಷಕರಿಗೆ, ಅಕ್ಷರಭ್ಯಾಸ, ನೀಡಿದ ಗುರುಗಳಿಗೆ ಹುಟ್ಟಿದ ಊರಿಗೆ ಕೀರ್ತಿ ತರಲೆಂದು ಶುಭ ಹಾರೈಸಿ ಅಭಿಮಾನದಿಂದ ಅಭಿನಂದಿಸಿ ಸನ್ಮಾನ ಪತ್ರ ನೀಡಿ ಗೌರವಿಸಿದ್ದಾರೆ. ನಗರದ ಸ್ನೇಹಿತ ಬಳಗದವರಾದ ಮಹಾಲಿಂಗ ಕಲಾಲ, ಅರ್ಜುನ ಪವಾರ, ಮಂಜುನಾಥ ಭಾವಿಕಟ್ಟಿ, ಶಿವು ಸಣ್ಣಕ್ಕಿ, ನಂದೇಶ ಲಾತುರ,ಅನಿಲ ಕವಾಸಿ,ಸುದೀಪ ಮೇಟಿ, ಆಕಾಶ ನಾವಿ,ಚೇತನ ಬಂಡಿವಡ್ಡರ,ಮಹಾಲಿಂಗ ಲಾತುರ, ಸಿದ್ದು ಹುದ್ದಾರ, ಆನಂದ ನುಲಿ, ರಾಷ್ಟ್ರ ಪ್ರಶಸ್ತಿ ಸಿಕ್ಕ ಹಿನ್ನೆಲೆ ಸಂತೋಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈ, ಅಧ್ಯಕ್ಷ ಡಾ ನಾಗೇಶ ಸಂಜೀವ ಕಿಣೆ, ಪ್ರ ಕಾರ್ಯದರ್ಶಿ ರಾಘವೇಂದ್ರ ಶೆಣೈ,ಸೇರಿದಂತೆ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸರ್ವಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.