ನೈಸಗರ್ಿಕ ಸಂಪನ್ಮೂಲ ಸಂರಕ್ಷಣಾ ಕಾರ್ಯಕ್ರಮ

ಲೋಕದರ್ಶನವದರದಿ

ರಾಣೇಬೆನ್ನೂರು: ಇಂದು ರೈತರು ನೈಸಗರ್ಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ, ಮಾರುಕಟ್ಟೆ ಆಧಾರಿತ ಬೆಳೆ ಬೆಳೆದು ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಐಎಸ್ಓಇಪಿ ಸೇವಾ ಸಂಸ್ಥೆಯ ನಿದರ್ೇಶಕಐ.ಎಸ್. ಪಾಟೀಲ ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಳವಾದ ಬೆಳೆಗಳನ್ನು ಕಂಡು ಅದನ್ನೆ ಬೆಳೆಚಿುದೆ ಎಲ್ಲ ವಿವಿಧ ಬೆಳೆಗಳನ್ನು ಮಿಶ್ರಣ ಬೆಳೆಗಳಾಗಿ ಬೆಳೆದಲ್ಲಿ ಬೆಲೆ ಸ್ಥಿರವಾಗಿರಲು ಸಾಧ್ಯ ಎಂದರು.

ಡೀನ್ ಡಾ| ಎಸ್.ಎಮ್. ಮಂಟೂರ ಮಾತನಾಡಿ, ರೈತರು ವೈವಿಧ್ಯಮಯ ಬೆಳೆ ಬೆಳೆಯುವುದರ ಜೊತೆಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಉತ್ತಮ ಬೆಳೆ ಬೆಳೆಯುವುದು ಅವಶ್ಯವಾಗಿದೆ ಎಂದು ಹೇಳಿದರು.  ಪ್ರಗತಿ ಪರ ರೈತ ಗಣೇಶಪ್ಪ ಕೊಡಿಹಳ್ಳಿ ಅವರು, ಶ್ರದ್ಧೆವಹಿಸಿ ಬ್ಯಾಂಕು ಕೊಡುವ ಬೆಳೆ ಸಾಲವನ್ನು ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ತಾವು ಸಾಧಿಸಿದ ಉನ್ನತಿ ಬಗ್ಗೆ ಹಂಚಿಕೊಂಡರು. ವಿಜ್ಞಾನಿ ಡಾ| ಕೆ.ಪಿ. ಗುಂಡಣ್ಣವರ  ರೈತರಿಗೆ ಎರೆಹುಳು ಕೃಷಿ ಬಗ್ಗೆ ಮಾಹಿತಿ ನೀಡಿದರು.  ಡಾ| ಅಶೋಕ ಪಿ, ಡಾ| ಆರ್.ಕೆ.  ಪಾಟೀಲ ಅವರು, ಸಾವಯವ ಕೃಷಿಯಲ್ಲಿ ಕೀಟ ಹತೋಟಿ ಬಗ್ಗೆ ಮಾಹಿತಿ ನೀಡಿದರು. ಶಿವಕುಮಾರ ವಿ.ಎಲ್ ಇವರು ಸಾವಯವ ಉತ್ಪನ್ನಗಳ ಮಾರಾಟ ಕುರಿತು ಮಾಹಿತಿ ನೀಡಿದರು. ಒಟ್ಟು 90 ಜನ ರೈತ ರು ಭಾಗವಹಿಸಿದ್ದರು.