ಕಾರ್ಯನಿರತ ಪತ್ರಕರ್ತರಿಗೆ ನೂತನ ಐ ಡಿ ಕಾರ್ಡ್‌ ವಿತರಣೆ

New ID cards issued to working journalists

ದೇವರ ಹಿಪ್ಪರಗಿ 29: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  2025-26 ನೇ ಸಾಲಿನ ಐಡಿ ಕಾರ್ಡ್‌ ವಿತರಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಸಂಗಮೇಶ ಉತ್ನಾಳ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮೊಮ್ಮದ ರಪೀಕ್ ಮೊಮಿನ್, ಹಿರಿಯ ಪತ್ರಕರ್ತರಾದ ಶ್ರೀಧರ ನಾಡಗೌಡ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಹುಸೇನ್ ಕೊಕಟನೂರ, ಈರನಗೌಡ ಪಾಟೀಲ, ಮಂಜುನಾಥ ಬ್ಯಾಕೋಡ, ಹಸನಸಾಬ ನದಾಫ, ನಬಿರಸೂಲ ಗುಡ್ನಾಳ, ಮಯೂರ ಕುಮಾರ ತಿಳಗುಳಕರ, ಮಲ್ಲಿಕಾರ್ಜುನ ಕಬ್ಬಿನ, ಅಣ್ಣಸಾಹೇಬ ಹೂಗಾರ, ಸಿದ್ದು ಕಾಟಕರ, ಅಹಮದಅಲಿ ಮುಲ್ಲಾ, ಮಲ್ಲಿಕಾರ್ಜುನ ಹಳ್ಳದ, ಅಶೋಕ ಗೊಲ್ಲರ, ಮಳೆಪ್ಪಗೌಡ ಬಿರಾದಾರ, ಶಂಕರ ಲಿಂಗ ದೂಳಖೇಡ ಸೇರಿದಂತೆ ತಾಲೂಕಿನ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.