ದುರ್ಗಾದೇವಿ ಶಿಕ್ಷಣ ಸಮಿತಿಯಿಂದ ನಿಖಿಲ ಬಾಂಡಗೆ ಅವರಿಗೆ ಸನ್ಮಾನ
ಗದಗ 28 : ಇತ್ತೀಚಿಗೆ ಪ್ರಕಟಗೊಂಡ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ನಿವಾಸಿ ಹಾಗೂ ಅಳಿಕೆಯ ಶ್ರೀ ಸತ್ಯಸಾಯಿ ಸಾಯಿ ಲೋಕ ಸೇವಾ ಪಿಯು ಕಾಲೇಜಿನ ವಿಧ್ಯಾರ್ಥಿಯಾದ ನಿಖಿಲ ಲಕ್ಷ್ಮಣ ಬಾಂಡಗೆ ಅವರು ವಿಜ್ಞಾನ ವಿಭಾಗದಲ್ಲಿ ಶೇ. 98.34 ರಷ್ಟು ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಅತ್ಯುತ್ತಮ ಸಾಧನೆ ಮಾಡಿದ ನಿಖಿಲ ಬಾಂಡಗೆ ಅವರಿಗೆ ನಗರದ ಗಂಗಾಪೂರ ಪೇಟೆಯಲ್ಲಿರುವ ಬನಶಂಕರಿ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ಶಿಕ್ಷಣ ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿಖಿಲ ಬಾಂಡಗೆ ಅವರ ಅಜ್ಜಿ ವಿಮಲಾಬಾಯಿ, ತಂದೆ ಲಕ್ಷ್ಮಣ, ತಾಯಿ ರೂಪಾ ಅವರುಗಳು ಸೇರಿದಂತೆ ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕ ಮೋಹನ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಫಕ್ಕಿರ್ಪ(ಮುತ್ತು) ಜಡಿ, ಹಿರಿಯರಾದ ರವಿ ಹಮಸಾಗರ, ರವಿ ಕಂಪ್ಲಿ, ವಸಂತ ಇಂಜನಿ, ಬಸವರಾಜ ಅಣ್ಣಿಗೇರಿ, ಮಲ್ಲೇಶ ಬಿಂಗಿ, ನಾಗರಾಜ ಶಿದ್ಲಿಂಗ, ಶಂಕರ ಕುದರಿಮೋತಿ, ಚನ್ನಪ್ಪ ಕೊಪ್ಪದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.