ಮಹಾಲಿಂಗಪುರ 28: ನಗರದ ಶ್ರೀ ಎಂ ಕೆ ಕುಲಗೋಡ ರವರ ಅರಿಸ್ಟಾಟಲ್ ಟೋಷನ್ ಕ್ಲಾಸಿಸ್ ಮತ್ತು ಜ್ಞಾನ ಜ್ಯೋತಿ ಪ್ರೌಢಶಾಲೆ ಆಶ್ರಯದಲ್ಲಿ ರವಿವಾರದಂದು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುಪಿಎಸ್ಸಿ ಐಎಎಸ್ ಪರೀಕ್ಷೆಯಲ್ಲಿ 529ನೇ ರಾಂಕ್ ಪಡೆದು ಬಾಗಲಕೋಟೆ ಜಿಲ್ಲೆ ಕೀರ್ತಿಯನ್ನು ಹೆಚ್ಚಿಸಿದ ಪಾಂಡುರಂಗ ಸದಾಶಿವ ಕಂಬಳಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸಾಧಿಸುವ ಛಲ ಮತ್ತು ಪ್ರಯತ್ನವಿದ್ದರೆ ಯಾವ ಪರೀಕ್ಷೆಯೂ ಕಠಿಣವಲ್ಲ.ಓದುವ ಆಸಕ್ತಿ ಇರಬೇಕು. ಸಾಧನೆ ಜೊತೆಗೆ ಸಮಾಜ ಸೇವೆಯ ಗುರಿಯಾಗಿರಬೇಕು, ಒಳ್ಳೆಯ ಸ್ನೇಹಿತರ ಸಂಘ, ಉತ್ತಮ ಪರಿಸರ,ನಿರಂತರ ಪ್ರಯತ್ನ ಮಾಡಬೇಕು.ಅಪಹಾಸ್ಯ ಮಾಡಿ ನಗುವವರೇ ನಮ್ಮ ಸಾಧನೆಗೆ ಸ್ಫೂರ್ತಿದಾತರು ಎಂದು ತಿಳಿಸಿದರು.
ನಂತರ ಪತ್ರಕರ್ತ ರಾಘವೇಂದ್ರ ನೀಲಣ್ಣವರ ಮಾತನಾಡಿ ಯೋಗದ ಪ್ರಾಮುಖ್ಯತೆ ಮತ್ತು ಶಿಕ್ಷಣದ ಮಹತ್ವ ಕುರಿತು ಮಾಹಿತಿ ನೀಡಿದರು. ನಂತರ ಸಂಸ್ಥೆಯ ಛೇರ್ಮನ್ ವಿಜಯಕುಮಾರ ಕುಳಲಿ ಮಾತನಾಡಿ ಶಿಕ್ಷಣದಿಂದ ಎಲ್ಲಾ ಬಗೆಯ ಕಷ್ಟಗಳನ್ನು ನಿವಾರಿಸಲು ಸಾಧ್ಯ ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ನಿಮ್ಮ ಗುರಿಯಾಗಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಎಂ ಕೆ ಕುಲಗೋಡ,ಪ ಪಂ ಸದಸ್ಯ ಪ್ರವೀಣ ಪಾಟೀಲ,ಸಂಗಪ್ಪ ಅಮಾತಿ,ರಾಮಜೀ ಮರಾಠಿ,ಮತ್ತು ಸಾಧಕರ ತಂದೆ ಸದಾಶಿವ ಕಂಬಳಿ, ತಾಯಿ ಸುರೇಖಾ ಕಂಬಳಿ, ಅವರಿಗೆ ಅದೇ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಿದರು.