ಸಂಬರಗಿ, 24 : ಗಡಿ ಭಾಗದ ಗ್ರಾಮಗಳಲ್ಲಿ ದಿನನಿತ್ಯ ಮಳೆಯ ಪ್ರಮಾಣ ಹೆಚ್ಚಾದ ಕಾರಣ ವಿದ್ಯುತ್ ಕಂಬ, ಅರ್ಥಿಂಗ್ ವೈರ್ ಯಾರೂ ಸ್ಪರ್ಷಿಸಬಾರದು ಹಾಗೂ ಜಾನುವಾರುಗಳನ್ನು ಕಟ್ಟಬಾರದು ಎಂದು ಜಂಬಗಿ ವಲಯ ಹೆಸ್ಕಾಂ ಅಧಿಕಾರಿ ಕೆ.ಎಸ್. ಠಕ್ಕಣ್ಣವರ ತಿಳಿಸಿದ್ದಾರೆ.
ಇತ್ತೀಚಿಗೆ ಮಳೆಯ ಪ್ರಮಾಣ ಬೆಳಗ್ಗಿನಿಂದ ಸಾಯಂಕಾಲದವರೆಗೆ ಧಾರಾಕಾರವಾಗಿ ನಡೆಯುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಕಂಬಕ್ಕೆ ಹಾಗೂ ಅರ್ಥಿಂಗ್ ವೈರ್‌ಗೆ ವಿದ್ಯುತ್ ಬರುವ ಸಾಧ್ಯತೆ ಇದ್ದು, ಜನರು ಯಾವುದೇ ಕಾರಣಕ್ಕೂ ಸ್ಪರ್ಷಿಸಬಾರದು ಹಾಗೂ ಸಿಬ್ಬಂಧಿ ಹೊರತುಪಡಿಸಿ ಕಂಬದ ಮೇಲೆ ಯಾರೂ ಹತ್ತಬಾರದು, ಏನಾದರೂ ತೊಂದರೆ ಇದ್ದರೆ ನೇರವಾಗಿ ದೂರವಾಣಿ ಮೂಲಕ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು. ತಾವು ಯಾರು ಸ್ಪರ್ಷ ಮಾಡಬಾರದು. ಏನಾದರೂ ವಿದ್ಯುತ್ ಅವಘಡಗಳು ನಡೆದರೆ ಯಾವುದೇ ಕಾರಣಕ್ಕೂ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊಣೆಗಾರರು ಇರುವುದಿಲ್ಲ ಎಂದು ತಿಳಿಸಲಾಗಿದ್ದು, ಬಳ್ಳಿಗೇರಿ, ಶಿರೂರ, ಜಂಬಗಿ, ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಹಾಗೂ ರೈತರು ಈ ಮುನ್ನೆಚ್ಚರಿಕೆಯ ಕಡೆಗೆ ಗಮನ ಹರಿಸಬೇಕೆಂದು ತಿಳಿಸಲಾಗಿದೆ.