ಶಾಸಕರ ಆರೋಗ್ಯ ವಿಚಾರಿಸಿದ ಅಧಿಕಾರಿ ವರ್ಗ
ಹಾವೇರಿ 21:ಇಲ್ಲಿನ ಇಜಾರಿ ಲಕಮಾಪುರದಲ್ಲಿರುವ ಸ್ಥಳೀಯ ಶಾಸಕರು ಹಾಗೂ ವಿಧಾನಸಭಾ ಉಪಸಭಾಧ್ಯಕ್ಷರಾದ ರುದ್ರ್ಪ ಲಮಾಣಿಅವರ ಮನೆಗೆ ಆಗಮಿಸಿದ ಕ್ಷೇತ್ರದ, ಜಿಲ್ಲೆಯ ಹಾಗೂ ಅಧಿಕಾರ ವರ್ಗದವರು ಉಪಸಭಾಧ್ಯಕ್ಷರ ಆರೋಗ್ಯ ವಿಚಾರಿಸಿದರು. ಬೇಗ ಪೂರ್ಣ ಪ್ರಮಾಣವಾಗಿ ಆರೋಗ್ಯ ಚೇತರಿಸಿಕೊಳ್ಳಲು ಶುಭ ಹಾರೈಸಿದರು. ತಮ್ಮ ನಿವಾಸದಲ್ಲಿ ರುದ್ರ್ಪ ಲಮಾಣಿಇದ್ದು,ಕ್ಷೇತ್ರದ ಹಾಗೂ ಜಿಲ್ಲೆಯಜನತೆಯ ನೂರಾರು ಅಹವಾಲುಗಳನ್ನು ಸ್ವೀಕರಿಸಿರು. ಪ್ರೀತಿಯಿಂದ ಅವರ ಮೇಲಿನ ಅಭಿಮಾನಿದಿಂದ ಆರೋಗ್ಯ ವಿಚಾರಿಸಲು ಆಗಮಿಸಿದವರಿಗೆ ಹೇಗೆ ಇದ್ದೀರಿ ಎಂದು ಕೇಳುವ ರುದ್ರ್ಪ ಲಮಾಣಿಅವರ ಮನಸ್ಸು ಹೃದಯ ವೈಶ್ಯಾಲತೆ ಎಲ್ಲರನ್ನು ನಿಬ್ಬೆರುಗುವಂತೆ ಇತ್ತು. ಉನ್ನತ ಸ್ಥಾನಮಾನದಲ್ಲಿಇದ್ದರೂ ಬಂದವರ ಆರೋಗ್ಯ ವಿಚಾರಣೆ ಮಾಡಿ, ನನ್ನಿಂದ ಏನು ಕೆಲಸ ಆಗಬೇಕು ಹೇಳಿ ಎಂದು ಮನೆಗೆ ಆಗಮಿಸಿದ ಎಲ್ಲರ ಸಮಸ್ಯೆಗಳನ್ನು ಕೇಳುವ ಹಾಗೂ ಪರಿಹರಿಸಲು ಮುಂದಾದರು.ಇಂತಹ ಸರಳ ಸಜ್ಜನಿಕೆಯ ಸ್ಥಳೀಯ ಶಾಸಕರು ಹಾಗೂ ವಿಧಾನಸಭಾಉಪಸಭಾಧ್ಯಕ್ಷರುಆಗಿರುವರುದ್ರ್ಪ ಲಮಾಣಿಅವರಆರೋಗ್ಯವನ್ನು ಸಮಾಜಕಲ್ಯಾಣಇಲಾಖೆಯ ಮೇಲ್ವಿಚಾರಕರು ವಿಚಾರಿಸಿ, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.ಎಲ್ಲರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಗಳಿಗೆ ಸೂಚನೆಗಳನ್ನು ನೀಡಿದರು. ಕ್ಷೇತ್ರದಅಭಿವೃದ್ಧಿಗೆ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡಲುಅವರಆರೋಗ್ಯ ಪೂರ್ಣ ಸುಧಾರಿಸಲಿ ಎಂದು ಆಗಮಿಸಿದ ಎಲ್ಲರ ಪ್ರಾರ್ಥನೆಯಾಗಿತ್ತು.