ಭಗವಾನ್ ಬುದ್ಧರ ಸಂದೇಶಗಳನ್ನು ನಮ್ಮ ಯುವ ಪೀಳಿಗೆ ಪಾಲಿಸುವಂತಾಗಬೇಕು: ಘಟ್ಟಿ

Our young generation should follow the messages of Lord Buddha: Ghatti...

ಕಾಗವಾಡ 21: ಮಾನವತಾವಾದಿ ಸಂದೇಶವನ್ನು ಸಾರುವ ಮೂಲಕ ವಿಶ್ವದಲ್ಲೇ ಖ್ಯಾತಿ ಪಡೆದ ಭಗವಾನ್ ಬುದ್ಧರ ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆ ಪಾಲಿಸುವಂತಾಗಬೇಕೆಂದು ಚಿಕ್ಕೋಡಿ ಉದ್ಯಮಿ ಹಾಗೂ ಎಐಜಿ ಫೌಂಡೇಶನ್ ಸಂಸ್ಥಾಪಕ ಅರವಿಂದ ಘಟ್ಟಿ ಹೇಳಿದರು. 

ಅವರು ಮಂಗಳವಾರ ದಿ. 20 ರಂದು ತಾಲೂಕಿನ ಐನಾಪೂರ ಪಟ್ಟಣದ ಭೀಮ ನಗರದ ಕರುಣಾ ಬೌದ್ಧ ವಿಹಾರದಲ್ಲಿ ದ ಬುದ್ಧಿಷ್ಟ್‌ ಸೊಸೈಟಿ ಆಫ್ ಇಂಡಿಯ್ಟ್ಮಾತ್ತು ಭಾರತೀಯ ಬೌದ್ಧ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ತಥಾಗತ ಗೌತಮ ಬುದ್ಧರ 2569ನೇ ಜಯಂತಿಯ ಕಾರ್ಯಕ್ರಮವನ್ನು ಬುದ್ಧ-ಅಂಬೇಡ್ಕರರ ಪ್ರತಿಮೆಯ ಪೂಜೆಯೊಂದಿಗೆ ದೀಪ ಬೆಳಗಿಸಿ, ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.  

ಜಯಂತಿ ನಿಮಿತ್ಯವಾಗಿ ವಿವಿಧ ಕಾರ್ಯಕ್ರಗಮಗಳು, ಉಚಿತ ಆರೋಗ್ಯ ಶಿಬಿರ ಸಂಪನ್ನಗೊಂಡವು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಗಣ್ಯರಿಗೆ ಸತ್ಕರಿಸಲಾಯಿತು. 

ಸಾನಿಧ್ಯವನ್ನು ತೇರದಾಳ ಬೌದ್ಧ ವಿಹಾರದ ಪ್ರಜ್ಞಾಬೋಧಿ ಭಂತೇಜೀ, ಅಧ್ಯಕ್ಷತೆಯನ್ನು ಸಹ-ಶಿಕ್ಷಕ ಮಹೇಶ್ ಜಯಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಬುದ್ಧ-ಅಂಬೇಡ್ಕರ ವಾದಿಗಳಾದ ಲತಾ ನಡೊಣಿ, ಆಶಾ ಕಾಂಬಳೆ, ಜಿಜಾಬಾಯಿ ದೋಡಮನಿ ಸುನಂದಾ ಕಾಂಬಳೆ, ಕಾಜಲ್, ಹನಮಂತ ಮಧಾಳೆ, ಲಖನ ವರದನ, ಪಾಂಡು ವಾಡೆದಾರ, ಜಾನು ಕಾಂಬಳೆ, ಬಾಸ್ಕರ ಸಾವಂತ, ರಮೇಶ ನಡೋಣಿ, ಗಜಾನನ ಕಾಂಬಳೆ, ಬಾನು ತಳಕೇರಿ, ಸುಭಾಷ ದೊಡಮನಿ, ಸುನೀಲ ಮಧಾಳೆ, ಜಯಮಾಲಾ ಕಾಂಬಳೆ, ಸುನೀತಾ ಭಂಡಾರೆ, ಭಾರತಿ ನಡೋಣಿ, ಕಸ್ತೂರಿ ತಳಕೇರಿ, ಆಶಾ ಕಾಂಬಳೆ, ಬಾಸ್ಕರ ಮಾದರಿ ಸೇರಿದಂತೆ ಇತರರು ಇದ್ದರು. 

ಹಣಮಂತ ಮಧಾಳೆ ಸ್ವಾಗತಿಸಿದರು. ಲಖನ ವರದನ ನಿರೂಪಿಸಿದರು. ಭಾಸ್ಕರ್ ಸಾವಂತ ವಂದಿಸಿದರು.