ಪತಂಜಲಿ ವತಿಯಿಂದ ವಾರ್ಡ್‌ ಯೋಗ ಪ್ರಭಾರಿಗಳ ನೇಮಕ

Patanjali appoints ward yoga in-charges

ಧಾರವಾಡ 24: ಇಂದು ಬೆಳಿಗ್ಗೆ ಧಾರವಾಡದ ಮದಿಹಾಳದ ಚಿದಂಬರ ಸೇವಾ ಸಮಿತಿ ಸಭಾ ಭವನದಲ್ಲಿ ಪತಂಜಲಿ ಯೋಗ ಪೀಠ, ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ, ಅಂತರರಾಷ್ಟ್ರೀಯ ಯೋಗ ಗುರು ಶ್ರೀ ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಧಾರವಾಡದ ಎಲ್ಲಾ ವಾರ್ಡ್‌ ಗಳಿಗೆ ಪತಂಜಲಿ ವಾರ್ಡ್‌ ಯೋಗ ಪ್ರಭಾರಿಗಳ ನೇಮಕ ಮಾಡಲಾಯಿತು.   

ವಿಶೇಷ ಯೋಗಾಭ್ಯಾಸ ಮತ್ತು ಪತಂಜಲಿ ವಾರ್ಡ್‌ ಯೋಗ ಪ್ರಭಾರಿಗಳ ನೇಮಕ ಮಾಡಿ ಮಾತನಾಡಿದ ಯೋಗ ಗುರು ಭವರಲಾಲ್ ಆರ್ಯ ಅವರು, " ಹುಬ್ಬಳ್ಳಿ - ಧಾರವಾಡ ಮತ್ತು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅತಿ ಹೆಚ್ಚು ಕಡೆ ಯೋಗ ಈ ಬಾರಿ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ 2025 ಹಬ್ಬವನ್ನು ಆಚರಿಸಬೇಕು ಅಂತ ಹೇಳಿ ತೀರ್ಮಾನ ಮಾಡಲಾಗಿದೆ. ಪತಂಜಲಿ ಯೋಗ ಸಮಿತಿ ವತಿಯಿಂದ  ಕರ್ನಾಟಕದಲ್ಲಿ 15000 ಜನ ಯೋಗ ಶಿಕ್ಷಕರು ಇದ್ದಾರೆ. ಅವರು ಎಲ್ಲರೂ ಹಲವಾರು ಕಡೆ ಈ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಮಾರ್ಗದರ್ಶನ ಮಾಡಲು ಸಿದ್ಧರಾಗಿದ್ದಾರೆ. ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಯವರು, ಎಲ್ಲಾ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘ ಸಂಸ್ಥೆ ಯವರು  ನಮ್ಮ ಪತಂಜಲಿ ಸೇವೆಯನ್ನು ಉಪಯೋಗಿಸಿಕೊಳ್ಳಬೇಕಾಗಿ ವಿನಂತಿ.  

ನಾವು ಯೋಗ ದಿನಾಚರಣೆ ಪ್ರಯುಕ್ತ ಇಂದಿನಿಂದ ಅಂತರರಾಷ್ಟ್ರೀಯ ಯೋಗ ದಿನದ ಪ್ರೋಟೋಕಾಲದ ಅಭ್ಯಾಸ ಮಾಡಿಸಲಿಕ್ಕೆ ಪ್ರಾರಂಭಿಸಿದ್ದೇವೆ, ನಮ್ಮ ಈ ಸೇವೆಯನ್ನು ಉಪಯೋಗಿಸಿಕೊಳ್ಳಿರಿ. ಜೊತೆಗೆ ಪ್ರತಿ ವಾರ್ಡ್‌ ನಲ್ಲಿ ಒಂದು ಯೋಗ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ವಾರ್ಡ್‌ ಪ್ರಭಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಅ ವಾರ್ಡ್‌ ನಲ್ಲಿರುವ ಶಾಲೆ, ಉದ್ಯಾನವನ, ಕಲ್ಯಾಣ ಮಂಟಪ ಅಥವಾ ಸಾರ್ವಜನಿಕ ಸ್ಥಳ ಗುರುತಿಸಿ ಅಲ್ಲಿ ಒಂದು ವಾರದ ಉಚಿತ ವಿಶೇಷ ಯೋಗ ಶಿಬಿರ ಮಾಡಿ, ಶಿಬಿರವನ್ನು ನಿರಂತರ ಯೋಗ ಕೇಂದ್ರವಾಗಿ ಪರಿವರ್ತಿಸಬೇಕು ಅಂತ ಹೇಳಿ ನಿರ್ಧಾರ ಮಾಡಲಾಗಿದೆ. ಆ ವಾರ್ಡ್‌ ನ ಎಲ್ಲ ಸಂಘ ಸಂಸ್ಥೆಗಳ ಸಭೆಯನ್ನು ಕರೆದು ಯೋಗಮಯ ವಾರ್ಡ್‌ - ಯೋಗಮಯ ಕರ್ನಾಟಕ ಅಭಿಯಾನಕ್ಕೆ ಎಲ್ಲರ ಸಹಕಾರ ಪಡೆಯಿರಿ ಎಂದರು. ಯೋಗ ರೋಗಿಗಳಿಗೆ ಚಿಕಿತ್ಸಾ ಪದ್ಧತಿ ಆದರೆ, ನಿರೋಗಿ ವ್ಯಕ್ತಿಗಳಿಗೆ ಜೀವನ ಪದ್ಧತಿ ಹಾಗೂ ಅಧ್ಯಾತ್ಮ ಸಾಧನೆ ಮಾಡುವಂತಹ ಸಾಧಕರಿಗೆ ಇದು ಸಾಧನಾ ಪದ್ಧತಿಯಾಗಿದೆ.  

ನಾವುಗಳು ನಮ್ಮ ಕೆಲಸ ಕಾರ್ಯಗಳನ್ನು ಶ್ರೇಷ್ಠವಾಗಿ, ಉತ್ತಮವಾಗಿ ಮಾಡಲಿಕ್ಕೆ ದಿನದ 24 ಗಂಟೆಗಳಲ್ಲಿ ಒಂದು ಗಂಟೆ ಯೋಗ ಅಭ್ಯಾಸಕ್ಕಾಗಿ ನಾವು ನೀಡಬೇಕು. ಈ ಯೋಗಾಸನಗಳ ಜೊತೆಗೆ ಪ್ರಾಣಾಯಾಮ ಅಭ್ಯಾಸ ಮಾಡಬೇಕು, ಏಕೆಂದರೆ ಪ್ರಾಣಾಯಾಮ ತುಂಬಾ ಅಗತ್ಯ, ಪ್ರಾಣದ ಒಂದು ಜಾಗೃತಿಯಿಂದ ದೇಹದ ಎಲ್ಲಾ ಅಂಗಾಂಗಗಳು ಸರಿಯಾದ ರೀತಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಬಿಪಿ, ಶುಗರ್ ಈಗ ಒಂದು ಲೈಫ್ ಸ್ಟೈಲ್ ಡೀಸೀಸ್ ರೂಪದಲ್ಲಿ ಸರ್ವಸಾಮಾನ್ಯ ಕಾಯಿಲೆ ಆಗಿದೆ. ಯೋಗಾಸನ ಮತ್ತು ಪ್ರಾಣಾಯಾಮದ ಅಭ್ಯಾಸದಿಂದ ಇವುಗಳನ್ನು ನಿಯಂತ್ರಿಸಬಹುದು. ಸಾತ್ವಿಕ ಆಹಾರ ಪದ್ಧತಿ, ಅತಿಯಾಗಿ ಕರಿದ ಪದಾರ್ಥಗಳನ್ನು, ಕೋಲ್ಡ್‌ ಡ್ರಿಂಕ್ಸ್‌ ಗಳನ್ನು ಸಾಧ್ಯವಾದಷ್ಟು ಅವಾಯ್ಡ್‌ ಮಾಡಬೇಕು. ಅದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕರ. ಆದ್ದರಿಂದ ಸಾತ್ವಿಕ ಆಹಾರದ ಸೇವನೆ, ಯೋಗ ಪ್ರಾಣಾಯಾಮ, ಓಂಕಾರ ಧ್ಯಾನವನ್ನು ಜೀವನದಲ್ಲಿ ಅಳವಡಿಸಿದರೆ ನಾವು ನೂರು ವರ್ಷ ನಿರೋಗಿಯಾಗಿ ಬದುಕಬಹುದು.  

ಆದ್ದರಿಂದ ಈ ವಾರ್ಡ್‌ ಯೋಗ ಪ್ರಭಾರಿಗಳು ಸಂಪೂರ್ಣ ವಾರ್ಡ್‌ ನ ನಾಗರಿಕರ ಆರೋಗ್ಯ ಕಾಪಾಡುವಂತಹ ಮಹತ್ವದ ಒಂದು ಜವಾಬ್ದಾರಿ ಈ ವಾರ್ಡ್‌ ಪ್ರಭಾರಿಗಳದ್ದಾಗಿರುತ್ತದೆ.  ಸಂಪೂರ್ಣ ಕರ್ನಾಟಕದಲ್ಲಿ ಏಕಕಾಲಕ್ಕೆ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರೋಟೋಕಾಲ್ ಅಭ್ಯಾಸ ಪ್ರಾರಂಭ ಮಾಡಿದ್ದೇವೆ. ಆಸಕ್ತರು ಸಂಪರ್ಕಿಸಿರಿ : 9343232641, 9902757952, 9663345308 , 9008100896 , 9632572469, 9448360021, 7975895840 ಹಾಗೂ ಈ ಮೂಲಕ ಯೋಗಯುಕ್ತ, ರೋಗ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದೇ ನಮ್ಮ ಸಂಕಲ್ಪವಾಗಿದೆ " ಎಂದು ಅವರು ಯೋಗದ, ಆರೋಗ್ಯದ  ಸಂದೇಶ ನೀಡಿದರು.  

ಈ ಕಾರ್ಯಕ್ರಮದಲ್ಲಿ ಚಿದಂಬರ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ ಕುಲಕರ್ಣಿ, ಪತಂಜಲಿ ಪರಿವಾರದ ಉಮಾ ಅಗಡಿ, ರಮೇಶ ಸುಲಾಖೆ, ಎಮ್‌.ಡಿ.ಪಾಟೀಲ್, ಟಕ್ಕಳಕಿ ಗುರೂಜಿ, ಶೈಲಜಾ ಮಾಡಿಕರ್, ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷರಾದ ಲಕ್ಷ್ಮೀ ಬಡಿಗೇರ್, ಭಾಸ್ಕರ ಬಡಿಗೇರ್, ಬಸವರಾಜ ಮಮ್ಮಿಗಟ್ಟಿ, ಬಲರಾಜ ಸಿಂಗ್ ಜಾವುರ್, ರತ್ನಾ ಜಾವುರ್, ವಿದ್ಯಾ ಹಜಾರೆ, ರಾಜೇಶ್ವರಿ ಹಡಗಲಿ, ನೇಹಾ ಬೂದನಿ, ಸವಿತಾ ಶಿಂದೆ, ಸುವರ್ಣ ಕರಿಂಡಿ, ಸೌಮ್ಯ, ಗಿರಿಜಾ, ಭಾಗ್ಯ, ರೂಪಾ, ಪೂರ್ಣಿಮಾ, ವಿಜಯಲಕ್ಷ್ಮಿ, ನಾಗರತ್ನ ಸುಲಾಖೆ, ತನುಜಾ ಪಾಟೀಲ್, ಲೀಲಾವತಿ ಸಾಂಬ್ರಾಣಿ, ವಸ್ತ್ರದಮಠ, ಗೀರೀಶ್ ದೊಡ್ಡಮನಿ, ವಂದನಾ ಪೂಜಾರ್, ಜಗದೇವಿ, ಕೃಷ್ಣ, ರೋಹಿಣಿ, ವಂದನಾ ಹೊಮ್ಕಾರ್, ವಿಲಾಸ ಗಾವಡೆ, ಅಂಕಿತ, ರಾಜಶೇಖರ್, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.