ಲೋಕದರ್ಶನ ವರದಿ
ಸ್ನಾತಕೋತ್ತರ ಶಿಕ್ಷಕರು ಹಲವು ಬೇಡಿಕೆಗೆ ಸತ್ಯಾಗ್ರಹ
ಗುಲಬರ್ಗಾ 21: ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕರ ಸಂಘದ ಪ್ರಾಧ್ಯಾಪಕರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸತ್ಯಾಗ್ರಹ ನಡೆಸಿದರು.
2023-24 ನೇ ಸಾಲಿನಲ್ಲಿ ಪದೋನ್ನತಿ ಪಡೆದ ಶಿಕ್ಷಕರ (ಹಿರಿಯ ಪ್ರಾಧ್ಯಾಪಕ/ ಪ್ರಾಧ್ಯಾಪಕ/ ಸಹಾಯಕ ಪ್ರಾಧ್ಯಾಪಕ ಹಾಗೂ ಸಹ- ಪ್ರಾಧ್ಯಾಪಕ) ಬಡ್ತಿ ಬಾಕಿ ವೇತನ ಹಣ ಬಿಡುಗಡೆ ಮಾಡುವುದು ಚಾಲ್ತಿಯಲ್ಲಿರುವ ಶಿಕ್ಷಕರ ಪದೋನ್ನತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವದು ಹೊಸದಾಗಿ ಅರ್ಜಿ ಆಹ್ವಾನ ಮಾಡುವದು. ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಕಟ್ಟಡ ಸಮೂಹಗಳ ರಕ್ಷಣೆಗೆ ಕಾವಲುಗಾರರನ್ನು ನೇಮಿಸುವುದು. ಕಲಾನಿಕಾಯದ ಡೀನರಾದ ಪ್ರೊ. ಅಬ್ದುಲ್ ರಬ್ ಉಸ್ತಾದ ಅವರ ಮೇಲೆ ಸಿಂಡೀಕೇಟ್ ಸದಸ್ಯರೊಬ್ಬರು ಮಾಡಿದ ಆರೋಪದ ಬಗ್ಗೆ ಸಿಂಡಿಕೇಟ್ ನಿರ್ಣಯದ ಮಾಹಿತಿ ಕೊಡುವುದು, ಅಲ್ಲದೆ ರದ್ದು ಪಡಿಸುವದು. ಗಳಿಕೆ ರಜೆ ಮಂಜೂರಾತಿ ಆದೇಶಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸುವದು. ಪ್ರಾಧ್ಯಾಪಕರಿಗೆ ತಮ್ಮ ಕೆಲಸದ ಜೊತೆಗೆ ಬೇರೆ ವಿಭಾಗದ/ಕಚೇರಿ ಕೆಲಸದ ಹೆಚ್ಚಿನ ಜವಾಬ್ದಾರಿಗಳನ್ನು ಕೊಟ್ಟಾಗ ಅಂತಹರಿಗೆ ಕೆ.ಸಿ.ಎಸ್.ಆರ್. ಕಾಯಿದೆಯಂತೆ ಹೆಚ್ಚಿನ ಗಳಿಕೆ ರಜೆ ಅಥವಾ ಮೂಲವೇತನದ ಪ್ರತಿಶತ (7ಅ) ಹೆಚ್ಚಿನ ಸಂಬಳವನ್ನು ನೀಡುವದು.
ಸದರಿ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸದಿದ್ದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘವು ಅನಿವಾರ್ಯವಾಗಿ ಶಿಕ್ಷಕರಿಗೆ ಒದಗಿಸಿರುವ ಹೆಚ್ಚಿನ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಲಾಗುವದು, ಜೊತೆಗೆ ಕಪ್ಪುಪಟ್ಟಿ ಪ್ರದರ್ಶನ, ಅಸಹಕಾರ ಚಳವಳಿಯನ್ನು ಹಮ್ಮಿಕೊಳ್ಳಲಾಗುವದೆಂದು ಮೇ 27ರ ವರೆಗೆ ಗಡುವು ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದು. ಅನಿವಾರ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಕ್ಷರಾದ ಪ್ರೊ. ಎಚ್.ಟಿ. ಪೋತೆ ಮತ್ತು ಕಾರ್ಯದರ್ಶಿ ಪ್ರೊ. ಆನಂದ ನಾಯಕ ಅವರು ತಿಳಿಸಿದ್ದಾರೆ.