ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಇರಬಾರದು: ಎಮ್.ಕೃಷ್ಣೇಗೌಡ

ಲೋಕದರ್ಶನವರದಿ

ರಾಣೇಬೆನ್ನೂರು: ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬಾರದು. ಸಂಭಾವನೆ ಪಡೆಯದಿದ್ದಲ್ಲಿ ಮಾತ್ರ ಸೇವೆಯಾಗುತ್ತದೆ. ವಿದ್ಯಾವಂತರು ತಾವು ಸಲ್ಲಿಸುವ ಕಾಯಕವನ್ನು ಸೇವೆ ಎಂದು ಗುರುತಿಸಿಕೊಳ್ಳುತ್ತಾರೆ. ಇಂತವರು ಗಾರೆ ಕೆಲಸ ಮಾಡುವವನಿಗೆ ಕೂಲಿಕಾರನೆಂದು ಕರೆಯುತ್ತಾರೆ. ಇದು ಸರಿಯಲ್ಲ ಎಂದು ಮೈಸೂರು ಸೆಂಟ್ ಫಿಲೋಮಿನ್ ಕಾಲೇಜು ನಿವೃತ್ತ ಪ್ರಾಚಾರ್ಯ ಎಮ್.ಕೃಷ್ಣೇಗೌಡ ಹೇಳಿದರು.

   ಅವರು ಶನಿವಾರ ಇಲ್ಲಿನ ಗಣೇಶ ನಗರದ ಶ್ರೀ ವೆಂಕಟೇಶ್ವರ ವಿದ್ಯಾ ಸಂಸ್ಥೆಯ ದೇವಿಕಾ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಕಳೆದ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ  ವಿದ್ಯಾಥರ್ಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇವೆ ಮಾಡುತ್ತೇನೆ ಎಂದು ಮತದಾರರಿಗೆ ಅಭಯ ನೀಡಿ ಪಡೆದುಕೊಂಡ ಅವಧಿಯಲ್ಲಿ ಅಧಿಕಾರ ಮಾಡುತ್ತಾರೆ. ಇದು ಯಾವ ನ್ಯಾಯ ಎಂದರು. 

ಬದುಕಿನಲ್ಲಿ ಸೂಕ್ಷ್ಮತೆಯನ್ನು ಗಮನಿಸಿ ಜೀವನ ನಡೆಸಬೇಕು. ಬದುಕಿನಅಲ್ಲಿ ಹಣಗಳಿಸುವ ಗುರಿ ಇಟ್ಟುಕೊಳ್ಳಬಾರದು. ಸಾಧನೆಯ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಎಕಾಗ್ರಚಿತ್ತದಿಂದ ವಿದ್ಯಾಥರ್ಿಗಳು ಶಿಕ್ಷಕರು ನೀಡುವ ಪಾಠವನ್ನು ಆಲಿಸಿ ಮನನ ಮಾಡಿಕೊಂಡಲ್ಲಿ ಮುಂದಿನ ಬದುಕು ಹಸನವಾಗಲಿದೆ ಎಂದರು. 

ಗಾಂಧೀಜೀ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಬ್ರಿಟೀಷ್ ಅಧಿಕಾರಿ ಚಚರ್ಿಲ್ ಅವರನ್ನು ಪ್ರಶ್ನಿಸಿ ಸ್ವತಂತ್ರರಾಗುತ್ತೇವೆಂದು ಹೇಳುವ ನಿಮ್ಮ ಭಾರತ ದೇಶದಲ್ಲಿ ಸಾಕ್ಷರರ ಸಂಖ್ಯೆ ಎಷ್ಟಿದೆ? ಮೊದಲು ಇಲ್ಲಿನ ಜನರನ್ನು ಸಾಕ್ಷರನ್ನಾಗಿ ಮಾಡುವ ಕನಸು ಕಾಣಿ ನಂತರ ಸ್ವತಂತ್ರ ಪಡೆಯುವಿರಂತೆ ಆಗ ಭಾರತವನ್ನ ಪ್ರಭಲವಾಗಿ ಕಟ್ಟಲು ಸಾಧ್ಯ ಎಂದು ಚಚರ್ಿಲ್ ಹೇಳಿದರಂತೆ. ಅವರ ಮಾತಿನಿಂದ ಪ್ರಭಾವಿತರಾದ ಗಾಂಧೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದಾಗಿ ಇತಿಹಾಸ ಹೇಳುತ್ತಲಿದೆ ಎಂದು ಕೃಷ್ಣೇಗೌಡ ಹೇಳಿದರು.

ಗಾಂಧೀಜಿಯವರು ಹಾಗೂ ಇತರ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಗಳಿಸಿದ ದೇಶದ ಸ್ವಾತಂತ್ರವನ್ನು ಗಟ್ಟಿಗೊಳಿಸಲು ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಗಳಂತಹ ಅನೇಕ ಸಂಸ್ಥೆಗಳ ಉದ್ಧಾತ್ತ ಸೇವೆಯಿಂದ ದೇಶದಲ್ಲಿ ಸಾಕಷ್ಟು ಯುವಕರನ್ನು ವಿದ್ಯಾವಂತರನ್ನಾಗಿ ಹಾಗೂ ಸಾಕ್ಷರ ಪ್ರಮಾಣವನ್ನು ಹೆಚ್ಚಿಸಿರುವ ಪರಿಣಾಮ ವಿಶ್ವದೆಲ್ಲೆಡೆಯಲ್ಲಿ ಭಾರತೀಯ ಯುವಕರು ಉದ್ಯೋಗ ಪಡೆದು ದೇಶದ ಹೆಮ್ಮೆಯನ್ನು ಹೆಚ್ಚಿಸಲು ಕಾರಣೀಕರ್ತರಾಗಿದ್ದಾರೆ ಎಂದರು. 

ಅಮೇರಿಕಾ ದೇಶವು ವಿಶ್ವದ ಎಲ್ಲ ದೇಶಗಳಿಗಿಂತ ಬಹು ಬೇಗ ಶ್ರೀಮಂತಿಕೆಯನ್ನು ಹೊಂದಿದೆ. ಅವರಿಗೆ ಗಳಿಸುವ ಆಶಾಭಾವನೆ ಕಡಿಮೆಯಾಗಿ ಮಜಾ ಮಸ್ತಿನಲ್ಲಿ, ಗೋವಾ ಬೀಚ್ನಲ್ಲಿ ಕಾಲ ಕಳೆಯುತ್ತಿರುವ ಸಂದರ್ಭವನ್ನು ಕನರ್ಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳ ಯುವಕರು ಅಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಮೂಲಕ ಸಂದರ್ಭವನ್ನು ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು. 

ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳುವಂತೆ ಅಮೇರಿಕಾದಲ್ಲಿ ಕನರ್ಾಟಕದ ಯುವಕರು ಉದ್ಯೋಗ ಪಡೆಯುವಲ್ಲಿ ಸಿಂಹಪಾಲು ಪಡೆದುಕೊಂಡಿದ್ದಾರೆ. ಎನ್ನುವ ಮಾತು ಸಾಕ್ಷಿಯಾಗಿದೆ. ಅಬ್ರಾಹಂ ಲಿಂಕನ್ ಹೇಳುವಂತೆ ಇಂದು ನೀನು ಶಾಲೆಯನ್ನು ತೆರೆ, ನಾಳೆ ಎರಡು ಜೈಲ್ಗಳು ಮುಚ್ಚಲಿವೆ ಎನ್ನುವ ಮಾತು ಸತ್ಯ. ಆದರೆ ಬರಿ ವಿದ್ಯಾವಂತರಾದರೆ ಸಾಲದು, ಗುಣವಂತಿಕೆ ಇರಬೇಕು. ಅಂತಹ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯ ಆಡಳಿತ ಮಂಡಳಿಯ ಸೇವೆ ಅನನ್ಯವಾಗಿದೆ ಎಂದು ಕೃಷ್ಣೇಗೌಡ ಶಿಕ್ಷಣ ಸೇವಾ ಕಾರ್ಯವನು ಶ್ಲಾಘಿಸಿದರು. 

  ಇದೇ ಸಂದರ್ಭದಲ್ಲಿ  ಕಳೆದ ವರ್ಷದ ಎಸ್.ಎಸ್.ಎಲ್.ಸಿ ಆಂಗ್ಲ ಮತ್ತು ಕನ್ನಡ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 60 ಕ್ಕೂ ಅಧಿಕ ವಿದ್ಯಾಥರ್ಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿ.ಆರ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ್, ನಿವೃತ್ತ ಪ್ರಾಚಾರ್ಯ ಎನ್. ಕೆ. ರಾಮಚಂದ್ರಪ್ಪ ಮಾತನಾಡಿದರು. ಆಡಳಿತಾಧಿಕಾರಿ ವಿಜಯಾ ಪಾಟೀಲ, ಪ್ರಾಚಾರ್ಯ ದಯಾನಂದ ಹರಿಹರ, ಮುಖ್ಯೋಪಾಧ್ಯಾಯ ಎಂ.ಕೆ.ಗುತ್ತಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.