ಯಲಬುರ್ಗಾ 26: ಕಾಶ್ಮೀರದ ಪಹಲ್ಟಾಮ್‌ನಲ್ಲಿ ಉಗ್ರರು ಹಿಂದೂ ಪ್ರವಾಸಿಗರ ಮೇಲಿನ ದಾಳಿಯನ್ನು ಖಂಡಿಸಿ ತಾಲೂಕಿನ ಸಮಸ್ತ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಗೈದರು.
ಪಟ್ಟಣದ ವೀರ ರಾಣಿ ಕಿತ್ತೂರು ಚನ್ನಮ್ಮಜೀ ವೃತ್ತದ ಮುಂದೆ ತಾಲೂಕಿನ ಸಮಸ್ತ ಹಿಂದೂಪರ ಸಂಘಟನೆಗಳು ಹಾಗೂ ಜನ ಪ್ರತಿನಿಧಿಗಳು ಶುಕ್ರವಾರ ಕ್ಯಾಂಡಲ್ ಹಚ್ಚಿ ಮೃತಪಟ್ಟವರಿಗೆ ನಮನ ಸಲ್ಲಿಸಲಾಯಿತು. ಕಾಶ್ಮೀರದಲ್ಲಿ ಕಳೆದ ಎರಡು -ಮೂರು ದಿನಗಳ ಹಿಂದೆ ನಡೆದ ಅಮಾನವೀಯ ಉಗ್ರರ ಹೈಯಕ್ರತ್ಯವನ್ನು ಖಂಡಿಸಿ, ಉಗ್ರರನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಲಾಯಿತು. ನಂತರ ಮೌನಾಚರಣೆ ಮಾಡಿ, ಅಗಲಿದ ಆತ್ಮಗಳಿಗೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ವೀರನಗೌಡ ಬನಪ್ಪಗೌಡ್ರು ಬಿಜೆಪಿ ಪಕ್ಷದ ತಾಲೂಕ ವಕ್ತರರಾದ ವೀರಣ್ಣ ಹುಬ್ಬಳ್ಳಿ ಮಾಜಿಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸುರೇಶ್ ಗೌಡ ಶಿವನಗೌಡ ಹಾಗೂ ಅಂಬರೀಶ್ ಹುಬ್ಬಳ್ಳಿ. ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಬಸವರಾಜ್ ಗುಳಗುಳಿ ಪಂಚಾಯತಿ ಸದಸ್ಯರಾದ ಬಸಲಿಂಗಪ್ಪ ಕೊತ್ತಲ್ ಕಳಕಪ್ಪ ತಳವಾರ್ ದಾನನಗೌಡ ತೊಂಡಿಹಾಳ ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷರಾದ ಶ್ರೀ ಕಲ್ಲೇಶಪ್ಪ ಕರಮುಡಿ ಬಾಪುಗೌಡ ಪಾಟೀಲ್ ಪ್ರದೀಪ್ ಕರಂಡಿ ಗೌತಮ್ ಜೋಶಿ ಕುಮಾರ್ ಗೌಡ ಶ್ರೀಕಾಂತ್ ಬುಡ್ಡನ್ ಗೌಡ್ರು ಹಾಗೂ ಅಂದಪ್ಪ ನೆರೆಗಲ್ ಶಿವಣ್ಣ ಕಮ್ಮಾರ್ ವೀರಭದ್ರ ಹಡಪದ ಪ್ರಕಾಶ್ ಕೊಳ್ಳಿ ಗೌಡಪ್ಪ ಹೊಸಳ್ಳಿ ನಾಗರಾಜ್ ಬಂಡಿ ಹಾಗೂ ಯಲಬುರ್ಗಾ ತಾಲೂಕಿನ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಯಲಬುರ್ಗಾ ನಗರ ಯುವಕ ಮಿತ್ರರು ದೇಶ ಪ್ರೇಮಿಗಳು ಹಾಗೂ ಪತ್ರಿಕಾ ಮಾಧ್ಯಮದ ಮಿತ್ರರು ಇದ್ದರು.